ನವದೆಹಲಿ: ತನ್ನ ಸರ್ಕಾರದ ಕಾರ್ಯಗಳ ಬಗ್ಗೆ ಪ್ರಚಾರ ಮಾಡಲು ಸಾರ್ವಜನಿಕ ಸಂಪರ್ಕ ಏಜೆನ್ಸಿಗಳನ್ನು ಬಳಸಿಕೊಳ್ಳುತ್ತಿರುವ ಎಎಪಿ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ವಾಗ್ದಾಳಿ ವ್ಯಕ್ತಪಡಿಸಿವೆ.
ತನ್ನ ಇಮೇಜ್ ಮೇಕ್ಓವರ್ಗಾಗಿ ಎಎಪಿ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದೆ ಎಂದು ಪಕ್ಷಗಳು ಆರೋಪಿಸಿವೆ.
ಸಾರ್ವಜನಿಕ ಕಲ್ಯಾಣದ ಬದಲು ತೆರಿಗೆ ಹಣವನ್ನು ಎಎಪಿ ತನ್ನ ಇಮೇಜ್ ಬಿಲ್ಡ್ ಮಾಡಿ ವೃತ್ತಿಪರ ಲಾಭ ಪಡೆಯಲು ಬಳಸುತ್ತಿದೆ ಎಂದು ಕಾಂಗ್ರೆಸ್ನ ದೆಹಲಿ ಅಧ್ಯಕ್ಷ ಅಜಯ್ ಮಕೇನ್ ಆರೋಪಿಸಿದ್ದಾರೆ.
ಜಯಗಳಿಸಿದ 18 ತಿಂಗಳ ಬಳಿಕ ಕೇಜ್ರಿವಾಲ್ ಸರ್ಕಾರ ಪಿಆರ್ ಏಜೆನ್ಸಿಗಳನ್ನು ಬಳಸಿ ತಮ್ಮ ಇಮೇಜ್ ವೃದ್ಧಿಸಲು ಕೋಟ್ಯಾಂತ ಹಣವನ್ನು ವ್ಯಯಿಸುತ್ತಿದೆ ಎಂದು ಬಿಜೆಪಿ ಮುಖಂಡ ವಿಜೇಂದರ್ ಗುಪ್ತಾ ಆರೋಪಿಸಿದ್ದಾರೆ.
ಆದರೆ ಎಎಪಿ ಮಾತ್ರ ತನ್ನ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಪಿಆರ್ ಏಜೆನ್ಸಿಗಳನ್ನು ಬಳಸಿಕೊಳ್ಳುವುದು ಅಪರಾಧವಲ್ಲ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.