ನವದೆಹಲಿ: ಸರ್ಕಾರದ ವಿದೇಶಿ ನೇರ ಹೂಡಿಕೆ ನೀತಿಯಲ್ಲಿ ತಿದ್ದುಪಡಿ ತರುವ ಮೂಲಕ ಅಟೋಮ್ಯಾಟಿಕ್ ಅಪ್ರೂವಲ್ ರೂಟ್ ಅಡಿಯಲ್ಲಿ ವಿವಿಧ ಕ್ಷೇತ್ರಗಳನ್ನು ಜಾರಿಗೆ ತರಲು ಕೇಂದ್ರ ಒಪ್ಪಿಗೆ ನೀಡಿದೆ.
ದೇಶದಲ್ಲಿ ಉದ್ಯೋಗ ಮತ್ತು ಉದ್ಯೋಗ ಸೃಷ್ಟಿಸುವ ಪ್ರಮುಖ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಬದಲಾವಣೆಗೊಂಡ ಹೊಸ ಎಫ್ಡಿಐ ನೀತಿಯಲ್ಲಿ ಕ್ಷೇತ್ರೀಯ ಬಂಡವಾಳ, ಅಟೋನ್ಯಾಟಿಕ್ ರೂಟ್ ಅಡಿಯಲ್ಲಿ ಹೆಚ್ಚು ಚಟುವಟಿಕೆಗಳನ್ನು ತರಲು ಹಾಗೂ ವಿದೇಶಿ ಬಂಡವಾಳ ಹೂಡಿಕೆ ನೀತಿಯಲ್ಲಿ ಸಡಿಲಿಕೆ ಇತ್ಯಾದಿ ನಿಯಮಗಳು ಸೇರಿವೆ.
ಸರ್ಕಾರ ಮಾಡಿರುವ ಕೆಲವು ಬದಲಾವಣೆಗಳೆಂದರೆ ರಕ್ಷಣಾ ವಲಯ ಮಾತ್ರವಲ್ಲದೇ ಆರ್ಮ್ಸ್ ಆಕ್ಟ್ 1959 ಅಡಿಯಲ್ಲಿ ಸಣ್ಣ ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳಲ್ಲಿ ಶೇ.100ರಷ್ಟು ವಿದೇಶಿ ನೇರ ಹೂಡಿಕೆಗೆ ಅನುಮತಿ.
’ಸ್ಟೇಟ್- ಆಫ್-ಆರ್ಟ್’ ಮತ್ತು ’ಕಟಿಂಗ್ ಎಡ್ಜ್’ ತಂತ್ರಜ್ಞಾನದ ಒಂದೇ ಬ್ರ್ಯಾಂಡ್ನ ವ್ಯಾಪಾರ ಉತ್ಪನ್ನಗಳ ವ್ಯಾಪಾರ ನಿಯಮಗಳನ್ನು 3 ವರ್ಷಗಳಿಗೆ ಸಡಿಲಿಸಲಾಗಿದೆ. ಭಾರತದಲ್ಲಿ ಆಹಾರ ಉತ್ಪಾದಿಸುವ ಕಂಪೆನಿಗಳು ಶೇ. 100 ಎಫ್ಡಿಐ ಮಾಡಬಹುದು.
ಭಾರತದಲ್ಲಿ ಮಳಿಗೆಗಳನ್ನು ತೆರೆಯಲಿರುವ ಅಪಲ್ ಕಂಪೆನಿ ಇದರ ಸಂಪೂರ್ಣ ಲಾಭ ಪಡೆಯಲಿದೆ ಎನ್ನಲಾಗಿದೆ.
ಅಟೋಮ್ಯಾಟಿಕ್ ರೂಟ್ ಅಡಿಯಲ್ಲಿ ಬ್ರೌನ್ಫೀಲ್ಡ್ ಫಾರ್ಮಾಸ್ಯೂಟಿಕಲ್ಸ್ ಶೇ.74ರಷ್ಟು ಎಫ್ಡಿಐಗೆ ಅನುಮತಿ.
ಅಟೋಮ್ಯಾಟಿಕ್ ರೂಟ್ ಅಡಿಯಲ್ಲಿ ವಿಮಾನ ನಿಲ್ದಾಣಗಳ ಯೋಜನೆಗೆ ಶೇ.100 ಎಫ್ಡಿಐ.
ನಾಗರಿಕ ವಿಮಾನಯಾನ ಯೋಜನೆಗೆ ಶೇ.100 ಎಫ್ಡಿಐ.
ಅಟೋಮ್ಯಾಟಿಕ್ ರೂಟ್ ಅಡಿಯಲ್ಲಿ ನಾಗರಿಕ ವಿಮಾನಯಾನ ಯೋಜನೆಗೆ ಶೇ.49ರಷ್ಟು ಎಫ್ಡಿಐ. ಶೇ.49 ಮೀರಿದ ಪ್ರಮುಖ ಯೋಜನೆಗೆ ಸರ್ಕಾರದ ಅನುಮೋದನೆ ಪಡೆಯುವುದು.
ಕೇಬಲ್ ನೆಟ್ವರ್ಕ್, ಡಿಟಿಎಚ್ಗಳಿಗೆ ಅಟೋಮ್ಯಾಟಿಕ್ ರೂಟ್ ಅಡಿಯಲ್ಲಿ ಶೇ.100 ಎಫ್ಡಿಐ.
ಭಾರತವನ್ನು ನಂ.1 ಎಫ್ಡಿಐ ತಾಣ ಎಂದು ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳು ಗುರುತಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.