ನವದೆಹಲಿ : ಭಾರಿ ವಿವಾದಗಳನ್ನು ಸೃಷ್ಟಿಸಿದ್ದ ಬಾಲಿವುಡ್ ಸಿನಿಮಾ ಉಡ್ತಾ ಪಂಜಾಬ್ ಕೊನೆಗೂ ತನ್ನ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡಿದ್ದು ಶುಕ್ರವಾರ ದೇಶದಾದ್ಯಂತ ಬಿಡುಗಡೆ ಸಜ್ಜಾಗಿದೆ.
ಪಂಜಾಬ್ನ ಡ್ರಗ್ಸ್ ಸಮಸ್ಯೆ ಮೇಲೆ ತಯಾರಿಸಲಾದ ಈ ಚಿತ್ರ ‘A’ ಸರ್ಟಿಫಿಕೇಟ್ ಪಡೆದುಕೊಂಡಿದೆ. ಪಂಜಾಬನ್ನು ಅತಿ ಕೆಟ್ಟದಾಗಿ ಬಿಂಬಿಸಿದೆ ಎಂಬ ಆರೋಪ ಹೊತ್ತು ನ್ಯಾಯಾಲಯದ ಕಟಕಟೆ ಏರಿ ಕೊನೆಗೂ ಈ ಸಿನಿಮಾ ಬಿಡುಗಡೆಗೆ ನ್ಯಾಯಾಲಯದಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ.
ಆದರೆ ಇದೀಗ ಉಡ್ತಾ ಪಂಜಾಬ್ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದು, ಇಡೀ ಸಿನಿಮಾ ಬಿಡುಗಡೆಗೆ ಮುನ್ನವೇ ಆನ್ಲೈನ್ನಲ್ಲಿ ಲೀಕ್ ಆಗಿದೆ. ಆದರೆ ಚಿತ್ರತಂಡ ಆನ್ಲೈನ್ನಲ್ಲಿರುವ ಸಿನಿಮಾವನ್ನು ತೆಗೆದುಹಾಕಲು ಯಶಸ್ವಿಯಾಗಿದ್ದು ಈ ಕುರಿತು ಪ್ರಕರಣವನ್ನು ದಾಖಲಿಸಿದೆ.
ಈ ಸಿನಿಮಾಗೆ ಸೆನ್ಸಾರ್ ಮಂಡಳಿ 29 ಕತ್ತರಿ ಪ್ರಯೋಗ ಮಾಡಿದ್ದೇ ದೊಡ್ಡ ವಿವಾದವಾಗಲು ಕಾರಣವಾಗಿತ್ತು. ಇದೀಗ ಸೆನ್ಸಾರ್ ಮಂಡಳಿ ಕಟ್ ಸೀನ್ಗಳ ಸಂಖ್ಯೆಯನ್ನು 18 ಕ್ಕೆ ಇಳಿಸಿದೆ. ಬಾಂಬೆ ಹೈಕೋರ್ಟ್ ಕೇವಲ 1 ಸೀನ್ಗೆ ಮಾತ್ರ ಕತ್ತರಿ ಹಾಕಲು ಹೇಳಿತ್ತು.
ಇನ್ನೊಂದೆಡೆ ವಿವಾದದಿಂಗಾಗಿ ಸಿನಿಮಾ ಭಾರೀ ಪ್ರಚಾರವನ್ನು ಪಡೆದುಕೊಂಡಿದ್ದು ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.