ಉಡುಪಿ : ವಿದ್ಯಾರ್ಥಿಗಳು ಮಾಹಿತಿಯ ಜತೆಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ಪಡೆದರೆ, ವೈದ್ಯಕೀಯ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಬಹುದು ಎಂದು ಕುತ್ಪಾಡಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಯು. ಶ್ರೀಕಾಂತ್ ಹೇಳಿದರು.
ಕುತ್ಪಾಡಿ ಧರ್ಮಸ್ಥಳ ಮಂಜು ನಾಥೇಶ್ವರ ಆಯುರ್ವೇದ ಕಾಲೇಜಿನ ಕೌಮಾರಭೃತ್ಯ ವಿಭಾಗ, ಇಂಡಿಯನ್ ಅಸೋಸಿಯೇಶನ್ ಆಫ್ ಪೀಡಿಯಾ ಟ್ರಿಕ್ಸ್ ಹಾಗೂ ರಾಷ್ಟ್ರೀಯ ನಿಯೋನೇ ಟಾಲಜಿ ವೇದಿಕೆಯ ಸಹಯೋಗದಲ್ಲಿ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಒಂದು ದಿನದ ನವಜಾತ ಶಿಶು ಸುರಕ್ಷಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಶುವಿನ ಸುರಕ್ಷೆ ಹಾಗೂ ಉತ್ತಮ ಬೆಳವಣಿಗೆಗೆ ಗರ್ಭಾವಸ್ಥೆಯಿಂದಲೇ ತಾಯಂದಿರು ಸಮರ್ಪಕವಾದ ಆಹಾರ, ವಿಹಾರಾದಿ ನಿಯಮಗಳನ್ನು ಪಾಲಿಸ ಬೇಕು ಎಂದು ಕಾಲೇಜಿನ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ. ವಿ.ಎನ್.ಕೆ. ಉಷಾ ಹೇಳಿದರು.
ತರಬೇತುದಾರರಾದ ಡಾ. ಪ್ರಶಾಂತ್ ಕಿಣಿ ಮತ್ತು ಡಾ.ಸುಬೋಧ್ ಶೆಟ್ಟಿ ಮಾತನಾಡಿ, ಶೇಕಡ 10ರಷ್ಟು ನವಜಾತ ಶಿಶುಗಳಲ್ಲಿ ‘ಬರ್ತ್ ಆಸ್ಫಿಕ್ಸಿಯ’ ಕಂಡುಬರುತ್ತದೆ.ಅಂತಹ ಸಂದರ್ಭದಲ್ಲಿ ಪ್ರಾಥಾಮಿಕ ಕೇಂದ್ರಗಳಲ್ಲಿ ಲಭ್ಯವಿರುವ ಸೌಕರ್ಯಗಳಿಂದ ಈ ರೋಗವನ್ನು ಎಷ್ಟರಮಟ್ಟಿಗೆ ನಿಭಾಯಿಸಬಹುದು ಎಂಬುವುದರ ಬಗ್ಗೆ ಶಿಬಿರಾರ್ಥಿಗಳಿಗೆ ತಿಳಿಸಿದರು. ನವಜಾತ ಶಿಶುವಿನ ಸುರಕ್ಷತೆಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿದರು.
ಇಂಡಿಯನ್ ಅಸೋಸಿಯೇಶನ್ ಆಫ್ ಪೀಡಿಯಾಟ್ರಿಕ್ಸ್ನ ರಾಜ್ಯಾಧ್ಯಕ್ಷ ಡಾ. ವಿ.ಎಚ್. ಕೊಟ್ರೇಶ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕೌಮಾರಭೃತ್ಯ ವಿಭಾಗದ ಮುಖ್ಯಸ್ಥ ಡಾ. ಪೃಥ್ವಿರಾಜ್ ಪುರಾಣಿಕ್ ಸ್ವಾಗತಿಸಿದರು, ಉಪನ್ಯಾಸಕಿ ಡಾ. ನಾಗರತ್ನ ನಿರೂಪಿಸಿದರು, ಡಾ. ಚೇತನ್ ಕುಮಾರ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.