ಬೆಳ್ತಂಗಡಿ : ಭಂಡಾರಿ ಸಮಾಜದ ಜನ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಂಘಟನೆಯ ಮೂಲಕ ತಮ್ಮ ಶಕ್ತಿಯನ್ನು ಬಲಪಡಿಸಬೇಕು. ಕ್ಷೌರಿಕ ವೃತ್ತಿ ಮಾಡುವವರು ವಿದ್ಯಾವಂತರಾಗುವುದರೊಂದಿಗೆ ಆಧುನಿಕ ತಂತ್ರಜ್ಷಾನವನ್ನು ಅಳವಡಿಸಿಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮತ್ತು ಸೇವಾ ಟ್ರಸ್ಟಿನ ಕಾರ್ಯದರ್ಶಿ ಎಂ. ಸೋಮಶೇಖರ ಭಂಡಾರಿ ಹೇಳಿದರು.
ಅವರು ಬೆಳ್ತಂಗಡಿಯ ಕುತ್ಯಾರು ಶ್ರೀ ಸೋಮನಾಥೇಶ್ವರ ಸಭಾಭವನದಲ್ಲಿ ಜರುಗಿದ ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘದ 11ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ನಾವು ಹುಟ್ಟಿದ ಸಮಾಜದ ಬಗ್ಗೆ ಗೌರವದೊಂದಿಗೆ ನಮ್ಮ ಸಮಾಜದ ಸೇವೆ ಮಾಡುವ ಮನೋಭಾವ ನಮ್ಮಲ್ಲಿ ಇರಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಎನ್. ದಿವಾಕರ ಭಂಡಾರಿ ಅವರು ಮಾತನಾಡಿ, ಸಂಘದ ಸದಸ್ಯರು ಪ್ರತಿ ವರ್ಷ ಮನೆ ಮನೆ ಭೇಟಿ ಮಾಡಿ ಸಮಾಜ ಬಾಂಧವರನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಇಂದಿನ ಯುವಕರಲ್ಲಿ ತಮ್ಮ ಸಮಾಜದ ಬಗ್ಗೆ ಆಸಕ್ತಿ ವಹಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅರಸಿನಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಹರಿಪ್ರಸಾದ್, ಸಂಘದ ನಿಕಟಪೂರ್ವ ಅಧ್ಯಕ್ಷರಾದ ಸುಂದರ ಕುಂಬ್ಳ ಮಾತನಾಡಿ ಶುಭಹಾರೈಸಿದರು. ಇದೇ ಸಂದರ್ಭ ಅರಸಿನಮಕ್ಕಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಹರಿಪ್ರಸಾದ್ರನ್ನು ಸನ್ಮಾನಿಸಲಾಯಿತು. ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಭಂಡಾರಿ ಮಹಾಮಂಡಲದ ಸದಸ್ಯ, ಕುವೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಎ. ಪೂವಪ್ಪ ಭಂಡಾರಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ತಾಲೂಕು ಕಾರ್ಯದರ್ಶಿ ನಾರಾಯಣ.ಬಿ ಕುಂಡದಬೆಟ್ಟು ವಾರ್ಷಿಕ ವರದಿ ವಾಚಿಸಿದರು. ಉಮೇಶ್ ಅನಿಸಿಕೆ ವ್ಯಕ್ತಪಡಿಸಿದರು. ಕೇಶವ ಭಂಡಾರಿ ಸಂಘದ ಜಾಗದ ಮಂಜುರಾಗುವ ಹಂತದ ಬೆಳವಣಿಗೆಗಳ ಬಗ್ಗೆ ವಿವರಿಸಿದರು. ಉಮೆಶ್ ಉಜಿರೆ ವಂದಿಸಿದರು. ಪ್ರತಿಭಾ ಸುಧೀರ್ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.