ಇಸ್ಲಾಮಾಬಾದ್: ತಾನು ಮೊದಲ ದೇಶಿ ನಿರ್ಮಿತ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ್ದಾಗಿ ಪಾಕಿಸ್ಥಾನ ಮೂಲದ ಉಗ್ರ ಸಂಘಟನೆ ತೆಹ್ರೀಕ್-ಇ-ತಾಲಿಬಾನ್ ಹೇಳಿಕೊಂಡಿದೆ.
ಅಲ್ಲದೇ ಈ ಬಗ್ಗೆ ಪ್ರಕಟಣೆಯನ್ನು ಅದು ಹೊರಡಿಸಿದ್ದು, ವಿಡಿಯೋವನ್ನೂ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಸೋಮವಾರ ’ಒಮರ್ 1’ ಎಂಬ ಹೆಸರಿನ ಕ್ಷಿಪಣಿಯನ್ನು ಉಡಾಯಿಸಿದ ದೃಶ್ಯವಿದೆ.
‘ದೇವರ ದಯೆಯಿಂದ ನಾವು ಶೀಘ್ರದಲ್ಲಿ ನಮ್ಮ ಶತ್ರುಗಳು ಈ ಕ್ಷಿಪಣಿಗೆ ಭಯಪಟ್ಟು ಓಡುವುದನ್ನು ನೋಡುತ್ತೇವೆ. ಟಾರ್ಗೆಟೆಡ್ ಶತ್ರುವನ್ನು ಆಘಾತಕ್ಕೊಳಪಡಿಸುವ ಸಾಮರ್ಥ್ಯ ಇದಕ್ಕೆ ಇದೆ’ ಎಂಬುದಾಗಿ ತಾಲಿಬಾನ್ ವಕ್ತಾರ ಮೊಹಮ್ಮದ್ ಖುರಾಸನಿ ಹೇಳಿಕೊಂಡಿದ್ದಾನೆ.
ನಮ್ಮ ಹೋರಾಟಗಾರರು ಸುಸೈಡ್ ವೆಸ್ಟ್ಸ್, ಸುಸೈಡ್ ವೆಹಿಕಲ್, ಹ್ಯಾಂಡ್ ಗ್ರೆನೈಡ್, ಆಚಿಟಿ ಜಮ್ಮರ್ ಡಿವೈಸ್ ಮುಂತಾದ ತಂತ್ರಜ್ಞಾನಗಳನ್ನು ಗರಿಷ್ಠಮಟ್ಟದಲ್ಲಿ ಬಳಸಿಕೊಳ್ಳುವಂತೆ ತರಬೇತಿ ನೀಡುತ್ತಿದ್ದೇವೆ ಎಂಬುದಾಗಿ ಆತ ಹೇಳಿಕೊಂಡಿದ್ದಾನೆ.
ತನ್ನ ನೆಲದಲ್ಲಿ ಭಯೋತ್ಪಾದಕರು ಇಷ್ಟೊಂದು ಮುಂದುವರೆದರೂ ಪಾಕಿಸ್ಥಾನ ಮಾತ್ರ ಇನ್ನೂ ನಿದ್ರಾವಸ್ಥೆಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.