ಬೆಳ್ತಂಗಡಿ : ಮೇ. 25ರಂದು ಬೆಳಿಗ್ಗೆ ಲಾಯಿಲಾ ಗ್ರಾ. ಪಂ. ನಲ್ಲಿ ಬೆಂಕಿ ಅವಘಡ ಸಂಭವಿಸಿ ಅನೇಕ ಮಹತ್ವದ ಕಡತಗಳು ಸುಟ್ಟು ಹೋಗಿದ್ದು ಇದರ ಹಿಂದೆ ಸಂಶಯ ವ್ಯಕ್ತವಾಗುತ್ತಿದ್ದು ಇದನ್ನು ಸಿಐಡಿಗೆ ತನಿಖೆಗೆ ಒಪ್ಪಿಸಬೇಕು ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಅವರು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.
ಪಂಚಾಯತ್ನಲ್ಲಿ ಹಲವು ವರ್ಷಗಳಿಂದ ಹಣದ ದುರುಪಯೋಗ, ಕೆಲವು ಸದಸ್ಯರಿಗೆ ತಿಳಿಯದಂತೆ ನಿರ್ಣಯ ಮಾಡುವುದು. ತ್ಯಾಜ್ಯಘಟಕ ನಿರ್ವಹಣೆಯಲ್ಲಿ ಹಣ ದುರುಪಯೋಗ, ಮುಂತಾದ ಅವ್ಯವಹಾರ ನಡೆಯುತ್ತಿದ್ದು, ಅಲ್ಲದೆ ಅದೇ ದಿನದಂದು ಲೆಕ್ಕಪರಿಶೋಧನೆ ನಡೆಸಲು ಅಧಿಕಾರಿಗಳು ದಿನ ನಿಗದಿ ಪಡಿಸಿದ್ದು ಇದೆಲ್ಲಾ ಗಮನಿಸುವಾಗ ಬಹಳ ಸಂಶಯ ವ್ಯಕ್ತವಾಗುತ್ತಿದೆ.
ಸ್ಥಳೀಯ ಕೆಲವೊಂದು ಗ್ರಾಮಸ್ಥರು ತನಿಖೆಗಾಗಿ ಪೊಲೀಸ್ ದೂರು ನೀಡಿದ್ದಾರೆ. ಮೆಸ್ಕಾಂ ಇಲಾಖೆ ಕೂಡಾ ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆ ಎಂದು ಸ್ಪಷ್ಟವಾಗಿ ಹೇಳುತ್ತಿಲ್ಲ. ದ.ಕ. ಜಿಲ್ಲಾ ಪಂಚಾಯತ್ನ ಉಪಕಾರ್ಯದರ್ಶಿಯವರು ಇಲ್ಲಿನ ಭ್ರಷ್ಟಾಚಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೆ ಪತ್ರದ ಮೂಲಕ ಒತ್ತಾಯಿಸಲಾಗಿದೆ ಎಂದು ಶಾಸಕ ಕೆ. ವಸಂತ ಬಂಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.