ಹೈದರಾಬಾದ್ : ಮೇ 13 ರಂದು ಹೈದರಾಬಾದ್ನಲ್ಲಿ ವಿಮಾನ ಜಗತ್ತಿನ ಅತ್ಯಂತದೊಡ್ಡ ಕಾರ್ಗೋ ವಿಮಾನ ಲ್ಯಾಂಡ್ ಆಗಿದೆ. ಇದು ಪ್ರಪಂಚದ ಅತೀ ದೊಡ್ಡ ಕಾರ್ಗೋ ವಿಮಾನ.
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಆ್ಯಟೋನೊವ್ ಎಎನ್-225 ಮ್ರಿಯಾ ಎಂಬ ವಿಮಾನ ಜಗತ್ತಿನ ಅತ್ಯಂತ ದೊಡ್ಡ ವಿಮಾನವಾಗಿದ್ದು, ಸುಮಾರು 2,85,000 ಕೆಜೆ ತೂಕವಿದೆ. ಇದು ಸರಿ ಸುಮಾರು 640 ಟನ್ ನಷ್ಟು ಭಾರವನ್ನು ಹೊರಬಲ್ಲದು.
ಯುಕ್ರೇನ್ ನಿರ್ಮಿತ ಈ ವಿಮಾನ ಯುದ್ಧ ಸಂದರ್ಭ ಸಾಮಾಗ್ರಿ ಪೂರೈಕೆ ಮತ್ತು ವಸ್ತುಗಳನ್ನು ಸಾಗಿಸಲು ಬಳಸಲಾಗುತ್ತದೆ. ಹಲವು ರಾಷ್ಟ್ರಗಳು ಇದನ್ನು ಬಳಸಿವೆ ಕೂಡಾ.
ಪ್ರಸಕ್ತ 117 ಟನ್ ತೂಕದ ಪವರ್ ಜನರೇಟರ್ಅನ್ನು ಪ್ರೇಗ್ ನಿಂದ ಆಸ್ಟ್ರೇಲಿಯಾದ ಸಿಡ್ನಿಗೆ ಸಾಗಿಸಲು ಬಳಸುತ್ತಿದ್ದು, ಆಸ್ಟ್ರೇಲಿಯಾಕ್ಕೆ ಭಾರತದ ಮಾರ್ಗವಾಗಿ ಸಾಗುತ್ತಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿ ಕೊಳ್ಳಲು ಮತ್ತು ತಾಂತ್ರಿಕ ತಪಾಸಣೆಗಾಗಿ ಲ್ಯಾಂಡ್ ಆಗಿದೆ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.