ಬೆಳ್ತಂಗಡಿ : ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಪುತ್ತೂರು ಸಹಾಯಕ ಕಮೀಷನರ್ ಡಾ| ರಾಜೇಂದ ಅವರು ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಅವರು ವೈದ್ಯರು ಹಾಗೂ ಅಧಿಕಾರಿಗಳನ್ನು ತರಾಟೆಗೆತೆಗೆದುಕೊಂಡರು.
ಆಸ್ಪತ್ರೆಯಲ್ಲಿ ಇರಬೇಕಾದ ವೈದ್ಯರು ಇಲ್ಲದಿರುವುದನ್ನು ಗಮನಿಸಿದ ಅವರು ಎಲುಬು ಮತ್ತು ಕೀಲು ತಜ್ಞರಿಗೆ ಕೂಡಲೇ ಕಾರಣ ಕೇಳಿ ನೋಟೀಸು ನೀಡುವಂತೆ ಸೂಚಿಸಿದರು.ಆಸ್ಪತ್ರೆಯಲ್ಲಿನ ಶುಚಿತ್ವದ ಕೊರತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ರಪಡಿಸಿದ ಅವರು ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡುವಂತೆ ಸೂಚಿಸಿದರು. ಶುಚಿತ್ವದ ಕಾರ್ಯಗಳಿಗೆ ಸಿಬ್ಬಂದಿಗಳ ಕೊರತೆಯಿರುವುದನ್ನು ತಿಳಿಸಿದರು ಎಂಟು ಮಂದಿ ಇರಬೇಕಾದಲ್ಲಿ ಮೂರು ಮಂದಿ ಇದ್ದರು ಈಗ ಒಬ್ಬರೇ ಎಲ್ಲ ಕೆಲಸಗಳನ್ನೂ ಮಾಡಬೇಕಾಗಿ ಬರುತ್ತಿದೆಎಂದು ವಿವರಿಸಿದರು.ಈ ಬಗ್ಗೆ ಶುಚಿತ್ವದಗುತ್ತಿಗೆ ವಹಿಸಿರುವ ಸಂಬಂಧಿಸಿದ ಕಂಪೆನಿಗೆ ತಿಳಿಸಿ ಅಗತ್ಯಕ್ರಮ ಕೈಗೊಳ್ಳಲು ಅವರು ಸೂಚಿಸಿದರು.
ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದಿದ್ದರೆ ಕತ್ತಲೆಯಲ್ಲಿ ಇರಬೇಕಾದ ಸ್ಥಿತಿಯಿದೆ. ನೂರು ಹಾಸಿಗೆ ಹೊಸ ಕಟ್ಟಡವನ್ನು ಹೊಂದಿರುವ ಆಸ್ಪತ್ರೆಯಲ್ಲಿ ಜನರೇಟರ್ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಾಗ ಅದಕ್ಕೆ ಡೀಸೆಲ್ ಖರೀದಿಸಲು ಅನುದಾನವಿಲ್ಲ ಎಂಬ ಉತ್ತರ ಬಂತು. ಈ ವರೆಗೂ ಅದಕ್ಕೆ ಅಗತ್ಯ ವ್ಯವಸ್ಥೆ ಮಾಡದಿರುವುದಕ್ಕಾಗಿ ಅಧಿಕಾರಿಗಳನ್ನು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಅದೇ ರೀತಿ ಆಸ್ಪತ್ರೆಯಲ್ಲಿರುವ ಅಂಬುಲೆನ್ಸ್ನ ಚಾಲಕರುಗಳು ಎಸಿಯವರು ಭೇಟಿಯ ಸಂದರ್ಭ ಇರಲಿಲ್ಲ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಅವರು, ಚಾಲಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಅಡುಗೆಕೋಣೆಯಲ್ಲಿ ಶುಚಿತ್ವವನ್ನು ಕಾಪಾಡುವಂತೆ ಅವರುತಿಳಿಸಿದರು.
ಆಸ್ಪತ್ರೆಯಕುಂದು ಕೊರತೆಗಳ ಬಗ್ಗೆ ಹಾಗು ಅದಕ್ಕ ಪರಿಹಾರ ಕಾಣಲು ಮೇ.೧೭ರಂದು ಬೆಳ್ತಂಗಡಿ ತಾಲೂಕು ಪಂಚಾಯತಿನಲ್ಲಿ ತಾಲೂಕು ಆಸ್ಪತ್ರೆಯ ಆರೋಗ್ಯ ಸಮಿತಿಯ ಸಭೆಯನ್ನು ಕರೆಯಲು ಹಾಗೂ ಅಲ್ಲಿ ಕಳೆದ ಐದು ವರ್ಷಗಳ ಖರ್ಚುವೆಚ್ಚಗಳ ವರದಿಯನ್ನು ಇಡುವಂತೆ ಸೂಚಿಸಿದರು. ಈ ಸಂದರ್ಭ ತಹಶೀಲ್ದಾರ್ ಪ್ರಸನ್ನಮೂರ್ತಿ, ಮುಖ್ಯ ವೈದ್ಯಾಧಿಕಾರಿ ಡಾ|ಆದಂ ಹಾಗೂ ಇತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.