ಬೆಳ್ತಂಗಡಿ : ನಾವು ಅಧರ್ಮದ ವಿರುದ್ಧ ಧರ್ಮಯುದ್ಧ ಮಾಡುತ್ತಿದ್ದೇವೆ. ಇದರಲ್ಲಿ ಒಂದೊಂದಾಗಿ ಯಶಸ್ಸು ಪಡೆಯುತ್ತಿದ್ದೇವೆ. ಇದು ದೇವಲೀಲೆ. ಬಾಕಿ ಎಲ್ಲಕ್ಕಿಂತ ಈ ಹೋರಾಟ ಕಾರ್ಯದಿಂದ ಸಮಾಜಕ್ಕೆ, ದೀನ ದಲಿತರಿಗೆ ಹೆಚ್ಚು ಉಪಕಾರವಾಗುತ್ತದೆ ಎಂದು ಟ್ರಸ್ಟ್ನ ಸಲಹಾ ಸಮಿತಿ ಸದಸ್ಯರಾದ, ಜಾನಪದ ವಿದ್ವಾಂಸ ಶ್ರೀ ಅನಂತರಾಮ ಬಂಗಾಡಿ ಹೇಳಿದರು.
ನಾಗರಿಕ ಸೇವಾ ಟ್ರಸ್ಟ್ನ ಆಶ್ರಯದಲ್ಲಿ ‘ಎನ್ಎಸ್ಟಿ 40 ಸಂಭ್ರಮ’ದ ಅಂಗವಾಗಿ ನಡೆದ ಬದಲಾದ ಸಾಮಾಜಿಕ-ರಾಜಕೀಯ- ಶೈಕ್ಷಣಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಟ್ರಸ್ಟ್ನ ಚಟುವಟಿಕೆಗಳನ್ನು ಪುನರ್ ರೂಪಿಸುವಿಕೆ ಕುರಿತ ಚಿಂತನ ಸಭೆಯಲ್ಲಿ ಈ ಅಭಿಪ್ರಾಯ ಪ್ರಕಟಿಸಿದರು.
ಟ್ರ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಮಾತನಾಡಿ ಶೊಷಣೆ-ಅನ್ಯಾಯದ ವಿರುದ್ಧ ಮಾಡುವ ಈ ಹೋರಾಟಕ್ಕೆ ಜಂಟಿ ಕ್ರಿಯಾ ಸಮಿತಿ, ಪ್ರಜಾಧಿಕಾರ ವೇದಿಕೆ-ಕರ್ನಾಟಕ, ವಿವಿಧ ರಾಷ್ಟ್ರೀಯ ಸಂಘಟನೆಗಳು ಬೆಂಬಲ ನೀಡುತ್ತಿವೆ. ಶಂಪಾ ದೈತೋಟ, ಆರ್.ಎನ್.ಭಿಡೆ, ಡಾ| ಎಂ. ಕೆ.ಭಟ್, ಡಾ| ಬಿ ಮಾಧವ ಭಂಡಾರಿ, ಡಾ| ನಿ.ಮುರಾರಿ ಬಲ್ಲಾಳ್, ಡಾ|ಕೆ.ಪ್ರಭಾಕರ ಆಚಾರ್, ಪಾರ್ಪಕ ಜೆಈಶ್ವರ ಭಟ್ ಮುಂತಾದವರು ಈ ಟ್ರಸ್ಟ್ನ ಬೆಳವಣಿಗೆಗೆ ಬೆನ್ನೆಲುಬಾಗಿದ್ದರು. ಅವರು ಹಾಕಿಕೊಟ್ಟ ಸಾಮಾಜಿಕ ನ್ಯಾಯ ಮತ್ತು ಪರಿಸರ ಸಂರಕ್ಷಣೆ ಕಾರ್ಯಕ್ರಮಗಳ ಮಾರ್ಗದಲ್ಲಿ ಮುಂದುವರಿಯೋಣ. ಇಡೀ ಸಮಾಜವೇ ಇಂದು ಜಾಗೃತಗೊಂಡಿದ್ದು ದೌರ್ಜನ್ಯ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ದಿನ ದೂರವಿಲ್ಲ. ನಮ್ಮ ಎಲ್ಲಾ ಹೋರಾಟಗಳೂ ಕಾನೂನುಬದ್ಧವಾಗಿ ಇದೆ.
ಟ್ರಸ್ಟ್ನ ಸ್ಥಾಪಕ ಟ್ರಸ್ಟಿ ರಂಜನ್ರಾವ್ ಯರ್ಡೂರ್ ಇದರಲ್ಲಿ ಸಂಪೂರ್ಣ ತೊಡಗಿದ್ದಾರೆ ಹಾಗೂ ಹೈಕೋರ್ಟ್, ಸುಪ್ರೀಂಕೋರ್ಟ್ನ ಪ್ರಸಿದ್ಧ ವಕೀಲರು ಸಹಕರಿಸುತ್ತಿದ್ದಾರೆ ಎಂದರು. ಕಡು ಬಡವರು, ಬಡವರ ಸಂಖ್ಯೆ ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಅತಿ ಕಡಿಮೆ. ರೂ 400-500 ಕೊಟ್ಟರೂ ಕೃಷಿಕೂಲಿಗೆ ಜನ ಸಿಗುತ್ತಿಲ್ಲ. ವಿದ್ಯಾವಂತರಿಗೆ ಒಂದಲ್ಲ ಒಂದು ಉದ್ಯೋಗ ಸಿಗಲು ಕಷ್ಟವಿಲ್ಲ. ಸರಕಾರಿ ಸೌಲಭ್ಯಗಳು, ಬ್ಯಾಂಕ್ ಸಾಲಗಳು ಅಭಿವೃದ್ಧಿಗೆ ಸಾಕಷ್ಟು ಸಿಗುತ್ತದೆ. ಪಂಚಾಯತ್ರಾಜ್ ವ್ಯವಸ್ಥೆ ಬಲಗೊಂಡಿದೆ. ತಂತ್ರಜ್ಞಾನದ ಬೆಳವಣಿಗೆಯಿಂದ ಎಲ್ಲಾ ಮಾಹಿತಿಗಳೂ ಕಂಪ್ಯೂಟರ್ನಿಂದ ಸಾಧ್ಯ. ಈ ಹಿನ್ನೆಲೆಯಲ್ಲಿ ಸೇವಾ ಸಂಸ್ಥೆಗಳ ಪಾತ್ರದ ಕುರಿತು ವಿಚಾರ-ವಿಮರ್ಶೆ ನಡೆಯಿತು.
ಯೋಜನೆಗಾಗಿ ಯೋಜನೆ ಮಾಡುವುದರ ಬದಲು ಅಗತ್ಯಆಧಾರಿತ ಯೋಜನೆ ರೂಪಿಸಬೇಕೆಂದು ಸಭೆ ಅಭಿಪ್ರಾಯಪಟ್ಟಿತು.ಸ್ವ ಸಹಾಯ ಸಂಘಗಳು ಸಾಲ ಕೇಂದ್ರಿತವಾಗಿದ್ದು ಮೂಲ ಕಲ್ಪನೆ ಕಳಕೊಂಡಿದೆ. ಈ ಕ್ಷೇತ್ರದಿಂದ ಟ್ರಸ್ಟ್ ಹಿಂದೆ ಬಂದಿದ್ದು ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜುಲಾ 19 ರಂದು ಸಲಹಾ ಸಮಿತಿ, ಸಮಾಲೋಚನಾ ವೇದಿಕೆ ಸದಸ್ಯರನ್ನು ಆಹ್ವಾನಿಸಿ ಇನ್ನೊಂದು ಚಿಂತನ ಸಭೆ ನಡೆಸಿ ಅಂದೇ ಸೌಹಾರ್ದಕೂಟ ಏರ್ಪಡಿಸುವುದಾಗಿಯೂ, ರಾಜ್ಯ ಮಟ್ಟದಲ್ಲಿ ಸ್ವಯಂಸೇವಾ ಸಂಸ್ಥೆಗಳ ಸಮಾಲೋಚನಾ ಸಭೆ ಆಗಸ್ಟ್ ಕೊನೆಗೆ ನಡೆಸುವುದಾಗಿಯೂ, ಡಿಸೆಂಬರ್ ಅಥವಾ ಜನವರಿ 2017ರಲ್ಲಿ ಟ್ರಸ್ಟ್ ಬಳಗದ ಸರ್ವಸದಸ್ಯರ, ಹಿತೈಷಿಗಳ ಬೃಹತ್ ಸಮಾವೇಶ ಏರ್ಪಡಿಸುವುದಾಗಿಯೂ ಸಭೆ ತೀರ್ಮಾನಿಸಿತು.
ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಎಚ್ ಸ್ವಾಗತಿಸಿದರು.ಟ್ರಸ್ಟಿ, ದಲಿತಅಭಿವೃದ್ಧಿ ಸಮಿತಿಯ ಸಂಚಾಲಕ ನಾರಾಯಣಕಿಲಂಗೋಡಿಚಿಂತನೆಗಾಗಿ ಸಿದ್ಧಪಡಿಸಿದ ಟಿಪ್ಪಣಿಯನ್ನುಓದಿದರು.ಟ್ರಸ್ಟಿ ಕೆ. ಸೋಮ ವಂದಿಸಿದರು.
ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಕಾರ್ಯದರ್ಶಿ ರತ್ನಾ ಹೊಸಳಿಕೆ, ಕೃಷಿಕರ ವೇದಿಕೆ ಕರ್ನಾಟಕದ ಸಹಕಾರ್ಯದರ್ಶಿ ಮೊದ್ಕುಂಞ ಪನ್ನೆ, ದ.ಕ.ಪರಿಸರಾಸಕ್ತಒಕ್ಕೂಟದಕಾರ್ಯಕಾರಿ ಸದಸ್ಯ ಕೆ.ಸೋಮ ವೇದಿಕೆಯಲ್ಲಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.