ಬೆಳ್ತಂಗಡಿ : ಯಾವುದೇಜಾತಿಧರ್ಮ ಮತ ಪಂಥವಿರಲಿ ನಾವು ನಮ್ಮ ಬಗ್ಗೆ ಸರಿಯಾಗಿ ತಿಳಿದು ಕೊಳ್ಳದಿದ್ದರೆ ನಮ್ಮಧರ್ಮ ಸಂಸ್ಕೃತಿಆಚಾರ ವಿಚಾರ ಪದ್ಧತಿ ಸಂಪ್ರದಾಯ ಏನು ಎಂದು ಅರಿಯುವುದು ಬಹಳ ಕಷ್ಟಕರವಾದ ವಿಷಯವಾಗಿದ್ದು, ಆಳವಾದ ವೇದ ಅಧ್ಯಯನದಿಂದ ಸಮಾಜದ ವಿಶ್ವಕರ್ಮನದರ್ಶನ ಆಗಲು ಸಾಧ್ಯ ಎಂದು ಕಟಪಾಡಿ ಶ್ರೀಮತ್ ಆನೆಗುಂದಿ ಮಹಾಸಂಸ್ಥಾನಮ್ ಸರಸ್ವತೀ ಪೀಠಾಧೀಶ್ವರರಾದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.
ಅವರು ಈಚೆಗೆ ಅಳದಂಗಡಿ ವಲಯದ ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘ ಇದರ ವತಿಯಿಂದ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಲ್ಲಿ ನಡೆದ 8 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ವಿಶ್ವಕರ್ಮ ಪೂಜೆಯಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡುತ್ತಿದ್ದರು.
ನಮ್ಮಲ್ಲಿ ಯಾವದೇ ದೇವತೆಗಳಿಗೂ ಪೂಜೆ ಪುರಸ್ಕಾರ ಮಾಡಿದರೂಅದು ಸರ್ವವ್ಯಾಪಿಯಾದ ವಿಶ್ವಕರ್ಮನಿಗೆ ಸಲ್ಲುತ್ತದೆಅದೇರೀತಿ ವಿಶ್ವಕರ್ಮನಿಗೆ ಪೂಜೆ ಮಾಡಿದರೆಅದುಎಲ್ಲಾದೇವಾದಿ ದೇವತೆಗಳಿಗೂ ಸಲ್ಲುತ್ತದೆ ಎಂದರಲ್ಲದೆ ಜತೆಗೆ ನಾವೆಲ್ಲ ಸಮಾಜಮುಖಿ ಚಿಂತನೆಗಳನ್ನು ಮಾಡಿಕೊಳ್ಳಬೇಕು, ಸ್ವಾಭಿಮಾನ ಶೂನ್ಯರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಸಮಾಜಕ್ಕೆ ಪ್ರಯೋಜನವಿಲ್ಲ ಆದುದರಿಂದ ಸಮಾಜಕ್ಕೆಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸೂಕ್ತ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆಯಯೋಗ ಶಿಕ್ಷಣದ ಜಿಲ್ಲಾ ಸಂಘಟಕರಾದ ಮಹೇಶ್ ಪತ್ತಾರ್ ಸಂಧ್ಯಾವಂದನೆಯ ಬಗ್ಗೆ ಹಾಗೂ ವಿಶ್ವಕರ್ಮರಆಚಾರ ವಿಚಾರ ಆಹಾರಗಳ ಬಗ್ಗೆ ಮಾತನಾಡಿದರು. ಇಳಂತಿಲ ತಾ.ಪಂ ಸದಸ್ಯರಾದಕೃಷ್ಣಯ್ಯಯಾನೆ ಪುಂಡಲೀಕಆಚಾರ್ಯ, ಬೆಳ್ತಂಗಡಿ ತಾಲೂಕು ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ರೀತಾ ಯೋಗೀಶ ಆಚಾರ್ಯ, ಶ್ರೀಧರ ಪುರೋಹಿತ್ ಕಟಪಾಡಿ, ವೇಲಾಪುರಿ ವಿಶ್ವನಾಥ ಶರ್ಮ ಬೇಲೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಾರಾಯಣಆಚಾರ್, ಪುರುಷೋತ್ತಮ ಆಚಾರ್ಯ, ಶ್ರೀಧರ ಆಚಾರ್ ಯಗರ್ಡಾಡಿ, ತಾರಾ ಲಕ್ಷ್ಮಣ ಆಚಾರ್ ಕುದ್ಯಾಡಿ, ಜಯರಾಮಆಚಾರ್ ಕುದ್ಯಾಡಿ, ಯೋಗೀಶ್ ಆಚಾರ್ಯ, ಮಡಂತ್ಯಾರು, ಕಮಲಾಕ್ಷ ಆಚಾರ್ ಬೆಳ್ತಂಗಡಿ, ಪುಟ್ಟಣ್ಣ ಆಚಾರ್ ಮಡಂತ್ಯಾರು, ದಿವಾಕರ ಆಚಾರ್ಗೇರುಕಟ್ಟೆ, ಆಶಾ ಸತೀಶ್ ಬೆಳ್ತಂಗಡಿ, ಅಳದಂಗಡಿ ಗ್ರಾ.ಪಂ ಮಾಜಿ ಸದಸ್ಯ ಮೋಹನ್ಎ.ದಾಸ್ ವಲಯದ ಎಲ್ಲಾ ಗ್ರಾಮ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘದ ಸುಂದರ ಆಚಾರ್ಯ ಕುದ್ಯಾಡಿ ವಹಿಸಿದ್ದರು.ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದಲ್ಲಿರಾಜಕೀಯ ಪ್ರವೇಶ ಮಾಡಿಇಲಂತಿಲ ತಾ.ಪಂ ಸದಸ್ಯರಾಗಿ ಆಯ್ಕೆಯಾದ ಕೃಷ್ಣಯ್ಯ ಯಾನೆ ಪುಂಡಲೀಕ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಪ್ರಕಾಶ್ ಪುರೋಹಿತ್ ವೇಣೂರುಇವರ ಆಚಾರ್ಯತ್ವದಲ್ಲಿ ವಿಶ್ವಕರ್ಮ ಪೂಜೆ ನಡೆಯಿತು.
ಸಂಘಟನಾ ಕಾರ್ಯದರ್ಶಿ ಮಂಜುನಾಥ ಆಚಾರ್ಯ ಅಳದಂಗಡಿ ಪ್ರಸ್ತಾವಿಸಿ ಸ್ವಾಗತಿಸಿದರು. ಗಣೇಶ ಆಚಾರ್ಯ ಬಲ್ಯಾಯಕೋಡಿ ಕಾರ್ಯಕ್ರಮ ನಿರ್ವಹಿಸಿದರು, ಸದಾನಂದ ಆಚಾರ್ಯ ಸುಲ್ಕೇರಿ ಮೊಗ್ರು ಧನ್ಯವಾದ ಸಲ್ಲಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.