ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಬಿಜೆಪಿ ಜಿಲ್ಲಾ ಪ್ರಭಾರಿಗಳನ್ನು ಬದಲಾವಣೆ ಮಾಡಿ ಆದೇಶಹೊರಡಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ನಡೆಯುವ ಜಿಲ್ಲಾ ಪಂಚಾಯತ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಸಂಬ್ಬಂಧಿಸಿದಂತೆ ಪ್ರಮುಖ ಪಾತ್ರವಹಿಸಲು ನಿಯೋಜಿಸಲಾಗಿದೆ ಎನ್ನಲಾಗುತ್ತಿದೆ.
ದಕ್ಷಿಣಕನ್ನಡ -ನಳಿನ್ ಕುಮಾರ್ ಕಟೀಲ್ ಮತ್ತು ಜೆ ಕೃಷ್ಣ ಪಾಲೇಮಾರ್, ಉಡುಪಿ – ಶೋಭಾ ಕರಂದ್ಲಾಜೆ ಮತ್ತು ಸುನಿಲ್ ಕುಮಾರ್, ಶಿವಮೊಗ್ಗ- ಈಶ್ವರಪ್ಪ ಮತ್ತು ಭಾನುಪ್ರಕಾಶ್, ಚಿಕ್ಕಮಗಳೂರು-ಸಿ.ಟಿ. ರವಿ ಮತ್ತು ಜೀವರಾಜ್, ಕೊಡಗು-ನಳಿನ್ ಕುಮಾರ್ ಕಟೀಲ್ ಮತ್ತು ಬೋಪಯ್ಯ, ಧಾರವಾಡ – ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಷಿ, ಬೆಂಗಳೂರು- ಡಿ.ವಿ.ಸದಾನಂದ ಗೌಡ ಮತ್ತು ಆರ್.ಅಶೋಕ್, ಮೈಸೂರು – ಸಿ.ಟಿ.ರವಿ ಮತ್ತು ಪ್ರತಾಪ್ಸಿಂಹ ಅವರನ್ನು ಆಯ್ಕೆ ಮಾಡಲಾಗಿದೆ .
ಯಡಿಯೂರಪ್ಪ ಬಿಜೆಪಿ ಜಿಲ್ಲಾ ಪ್ರಭಾರಿಗಳ ಆಯ್ಕೆ ಮಾಡುವಾಗ ಶಾಸಕ, ಸಂಸದ ಮತ್ತು ಮಾಜಿ ಶಾಸಕರಿಗೆ ಹೆಚಿನ ಒತ್ತು ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.