ಬೆಳ್ತಂಗಡಿ : ತುಳುನಾಡಿನ ಜನತೆಯಲ್ಲಿ ಧರ್ಮಪ್ರಜ್ಞೆಯನ್ನು ಮೂಡಿಸಿರುವುದೇ ಯಕ್ಷಗಾನ ಎಂದು ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಅಳದಂಗಡಿಯ ಜ್ಞಾನಮಾರ್ಗ ವಠಾರದಲ್ಲಿ ಮಿಜಾರು ಅಣ್ಣಪ್ಪ ವೇದಿಕೆಯಲ್ಲಿ ಶ್ರೀ ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದ 9 ನೇ ವಾರ್ಷಿಕೋತ್ಸವದಲ್ಲಿ ಸಾಧಕರಿಗೆ ಅರುವ ಪ್ರಶಸ್ತಿಯನ್ನು ಪ್ರದಾನಿಸಿ ಆಶೀರ್ವದಿಸಿದರು.
ಪರೋಪಕಾರವೆಂಬುದು ತುಳುನಾಡಿನ ಮಣ್ಣಿನ ಗುಣವೇ ಆಗಿದೆ. ಸೇವೆ ಮಾಡಲು ಹಲವು ಕ್ಷೇತ್ರಗಳಿವೆ. ಕಲಾವಿದರ ಮನಸ್ಸು ವಿಶಾಲ. ಅವರು ಕಲೆಯ ಮೂಲಕ ಸಮಾಜದಲ್ಲಿ ಆದರ್ಶದ, ವ್ಯಕ್ತಿತ್ವದ ಪ್ರಚಾರ ಮಾಡುತ್ತಿದ್ದಾರೆ. ಯಕ್ಷಗಾನಂದತಹ ಕಲೆಯ ಮೂಲಕ ಧರ್ಮಪ್ರಜ್ಞೆ ಜಾಗೃತವಾಗುತ್ತಿದೆ ಎಂದ ಅವರು ಸಮಾಜ ಪರ ಕಾರ್ಯಗಳನ್ನು ಇಲ್ಲಿನ ಪ್ರತಿಷ್ಠಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ಶ್ರೀಗಳು ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಯಕ್ಷಗಾನ ಪ್ರಸಿದ್ದ ಹಾಸ್ಯಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರಿಗೆ ಅರುವ ಪ್ರಶಸ್ತಿ ಹಾಗೂ ಉದ್ಯಮಿ ರಘುವೀರ ಎ. ಶೆಟ್ಟಿ ನಲ್ಲೂರು ಅವರಿಗೆ ದಾನ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದರು. ದಿವ್ಯ ಮೂಲ್ಯ ಅವರಿಗೆ ಮದುವೆಗೆ ಆರ್ಥಿಕ ಸಹಾಯ ನೀಡಲಾಯಿತು.
ಅಧ್ಯಕ್ಷತೆಯನ್ನು ಅರುವ ಕೊರಗಪ್ಪ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ. ಸದಸ್ಯೆ ವಿನುಷ ಪ್ರಕಾಶ್ ಇದ್ದರು.
ಸುಚಿತ್ರಾ ದೇವಾಡಿಗ ಪ್ರಾರ್ಥಿಸಿದರು. ಪ್ರತಿಷ್ಠಾನ ಕೋಶಾಧಿಕಾರಿ ಕೆ. ದೇವಿಪ್ರಸಾದ್ ಶೆಟ್ಟಿ ಪ್ರಸ್ತಾವಿಸಿ ಸ್ವಾಗತಿಸಿದರು. ಯಕ್ಷಗಾನ ಕಲಾವಿದ ವರ್ಕಾಡಿ ತಾರಾನಾಥ ಬಲ್ಯಾಯ ಅಭಿನಂದನಾ ಭಾಷಣ ಮಾಡಿದರು. ಶನೀಶ್ವರ ಪೂಜಾ ಸೇವಾ ಸಮಿತಿ ಅಧ್ಯಕ್ಷ ಶಶಿಧರ ಎ. ಶೆಟ್ಟಿ ವಂದಿಸಿದರು. ಸಂತೋಷ್ ಕುಮಾರ್ ಸಿದ್ದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ೮ ನೇ ವರ್ಷದ ಉಚಿತ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ನೆರವೇರಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.