ಬೆಂಗಳೂರು: ಕರ್ನಾಟಕದಲ್ಲಿ ನಡೆದ ಪಿಯು ಪರೀಕ್ಷೆ ಮೌಲ್ಯಮಾಪನ ಬಹಿಷ್ಕರಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಿಕ್ಷಕರು ಪ್ರತಿಭಟನೆ ಮುಂದುವರಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಪಿಯು ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿದ್ದು, ಸರ್ಕಾರದ ತೀರ್ಮಾನಗಳಿಗೆ ಸಮ್ಮತಿ ದೊರೆಯಲಿಲ್ಲ. ಹೀಗಾಗಿ ಸರ್ಕಾರದ ನಾಲ್ಕನೇ ಸುತ್ತಿನ ಮಾತುಕತೆ ಕೂಡ ವಿಫಲಗೊಂಡಿದೆ.
ಕುಮಾರ್ ನಾಯಕ್ ವರದಿ ಜಾರಿ ಮೂಲಕ ವೇತನ ನಿವಾರಣೆ ಸಾಧ್ಯವಿಲ್ಲ. ಇದು ಜಾರಿಗೊಳಿಸಿದಲ್ಲಿ ಇತರ ಇಲಾಖೆಗಳು ವೇತನ ಪರಿಕ್ಷರಣೆಗೆ ಬೇಡಿಕೆ ಇಡುವ ಸಾಧ್ಯತೆ ಇದ್ದು, ಸರ್ಕಾರ 40-50 ಕೋಟಿ ನೀಡಲಿದೆ. ಈ ಮೂಲಕ ವಿಶೇಷ ಭತ್ಯೆ ಹೆಚ್ಚಿಸಲಾಗುವುದು ಎಂದು ಕಿಮ್ಮನೆ ರತ್ನಾಕರ್ ಹೇಳಿದ್ದರು.
ಆದರೆ ಪಿಯು ಉಪನ್ಯಾಸಕರು ಕುಮಾರ್ ನಾಯಕ್ ವರದಿ ಜಾರಿ ಮೂಲಕವೇ ವೇತನ ಪರಿಷ್ಕರಿಸಲು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರ ನೇಮಿಸಿದ್ದ ಸಮಿತಿ ಮೌಲ್ಯಮಾಪಕರ ಸಂಬಳವನ್ನು 22,100 ರಿಂದ 25,300 ಕ್ಕೆ ಏರಿಸಲಾಗಿದ್ದು, ಪಿಯು ಪರೀಕ್ಷೆ ಫಲಿತಾಂಶವು ಮೇ ಮೊದಲ ವಾರ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ರಾಜ್ಯ ಸರ್ಕಾರ ಶಿಕ್ಷಕರ ತುಟ್ಟಿಭತ್ಯೆಯನ್ನು ಶೇ.30ರಷ್ಟು ಹೆಚ್ಚಿಸಿದ್ದು, ಪ್ರತಿಭಟನಾ ನಿರತ ಶಿಕ್ಷಕರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಲಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.