ಬೆಂಗಳೂರು : ಇಂದು ರಸಾಯನ ಶಾಸ್ತ್ರ ಮರು ಪರೀಕ್ಷೆ ಪ್ರಶ್ನೆಪತ್ರಿಕೆಗಳು ಮತ್ತೊಮ್ಮೆ ಸೋರಿಕೆಯಾಗಿರುವುದರ ವಿರುದ್ಧ ಶಿಕ್ಷಣ ಇಲಾಖೆ ಮತ್ತು ಸರಕಾರವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿದೆ.
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಜೆಡಿಎಸ್ ಸದಸ್ಯ ವೈಎಸ್ವಿ ದತ್ತಾ ಸರಕರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಪಿಯು ಬೋರ್ಡ್ ಅಧಿಕಾರಗಳ ಕೈವಾಡವಿದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಸೋರಿಕೆಯಾದಾಗ ಸಿಐಡಿ ತನಿಖೆಯನ್ನು ಮಾಡಲು ಸರಕಾರ ಆದೇಶಿಸಿತ್ತು. ಆದರೆ ಅದರ ಪ್ರಗತಿ ಎಲ್ಲಿಯವರೆಗೆ ಸಾಗಿದೆ. ಸಿಐಡಿ ಅಧಿಕಾರಿಗಳು ಯಾಕೆ ಆರೋಪಿಗಳನ್ನು ಬಂಧಿಸಲಿಲ್ಲ. ಪ್ರಶ್ನೆಪತ್ರತಿಕೆ ಸೋರಿಕೆಯ ಹಿಂದೆ ಕಿಂಗ್ ಪಿನ್ಗಳಾಗಿ ಅಧಿಕಾರಿಗಳ ಹೆಸರು ಕೇಳಿಬರುತ್ತಿದ್ದರು ಸರಕಾರ ಯಾಕೆ ಕ್ರಮಕೈಗೊಂಡಿಲ್ಲ. ಆ ಅಧಿಕಾರಿಗಳನ್ನು ಯಾರು ರಕ್ಷಿಸುತ್ತಿದ್ದಾರೆ ಎಂದು ಸರಕಾರವನ್ನು ಪ್ರಶ್ನಿಸಿದ್ದು, ಈ ಬಗ್ಗೆ ವಿಧಾನ ಸಭಾಧ್ಯಕ್ಷರ ಗಮನ ಸೆಳೆದಿದ್ದಾರೆ.
ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಾನು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ತಕ್ಷಣವೇ ಕ್ರಮಕೈಗೊಳ್ಳಲು ಆದೇಶಿಸಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯದಿರಲು ಸಾಧ್ಯವಿಲ್ಲ. ಅವರು ಪರೀಕ್ಷೆಯನ್ನು ಬರೆಯಲೇಬೇಕು. ಸಿಇಟಿ ಮತ್ತು ಇತರ ವೃತ್ತಿಪರ ಪರೀಕ್ಷೆಗಳ ದಿನಾಂಕವನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಿ, ಇಂದು ಸಂಜೆಯೊಳಗೆ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.
ಈ ಬಗ್ಗೆ ಸ್ಪೀಕರ್ ಮಧ್ಯೆ ಪ್ರವೇಶಿಸಿ ಅಧಿಕಾರಿಗಳ ಬಗ್ಗೆ ಪ್ರತಿಪಕ್ಷ ಸದಸ್ಯರು ಸದನದ ಗಮನಸೆಳೆದಿದ್ದಾರೆ ಅವರ ಬಗ್ಗೆ ಏನು ಕ್ರಮಕೈಗೊಳ್ಳುತ್ತೀರಿ? ಎಂದಾಗ ತಾನು ಆ ಬಗ್ಗೆ ಗಮನಹರಿಸಿದ್ದು, ತನಿಖೆ ನಡೆಸಲು ಸಿಐಡಿ ಅಧಿಕಾರಿ ಸೋನಿಯಾ ನಾರಂಗ್ ಅವರಿಗೆ ತಿಳಿಸಿದ್ದೇನೆ. ಪಿಯು ಬೋರ್ಡ್ನಲ್ಲಿಯೇ ಹುಳುಕಿದ್ದು ಶಿಕ್ಷಣ ಇಲಾಖೆ ಇದನ್ನು ಗಭೀರವಾಗಿ ಪರಿಗಣಿಸಿದೆ ಎಂದು ಅವರು ಸಚಿವ ಕಿಮ್ಮನೆ ರತ್ನಾಕರ್ ಮಾಹಿತಿ ನೀಡಿದರು.
ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಪತಿಪಕ್ಷಗಳು ಸದನದ ಭಾವಿಗಿಳಿದು ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.