ನವದೆಹಲಿ: ಜೆಎನ್ಯುನಲ್ಲಿ ಉಗ್ರ ಅಫ್ಜಲ್ ಗುರು ಪರವಾಗಿ ಕಾರ್ಯಕ್ರಮವನ್ನು ಆಯೋಜಿಸಿ ದೇಶದ್ರೋಹದ ಆರೋಪಕ್ಕೆ ಗುರಿಯಾದ ಕನ್ಹಯ್ಯ ಕುಮಾರ್ನನ್ನು ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರಿಗೆ ಹೋಲಿಕೆ ಮಾಡಿದ್ದಾರೆ ಕಾಂಗ್ರೆಸ್ ಮುಖಂಡ ಹಾಗೂ ಸಂಸದ ಶಶಿ ತರೂರ್.
ಜೆಎನ್ಯು ಆವರಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರ ಭಾಷಣ ಮಾಡಿದ ವೇಳೆ ಕನ್ಹಯ್ಯನಿಗೆ ಹೊಗಳಿಕೆಯ ಮಳೆ ಸುರಿಸಿ ಆತನನ್ನು ಭಗತ್ ಸಿಂಗ್ಗೆ ಹೋಲಿಸಿದ್ದಾರೆ.
ಅವರ ಈ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಟ್ವಿಟರ್ನಲ್ಲಿ ಭಾರೀ ಆಕ್ರೋಶಗಳೂ ವ್ಯಕ್ತವಾಗಿವೆ.
ತರೂರ್ ಅವರ ಐಕ್ಯೂ ಮಟ್ಟ ಅವರ ಕಾಲಿನ ಶೂಗಳಿಗಿಂತಲೂ ಕಡಿಮೆ ಇದೆ ಎಂದು ಬಿಜೆಪಿ ಸಂಸದ ಪರೇಶ್ ರಾವಲ್ ಟ್ವಿಟ್ ಮಾಡಿದ್ದಾರೆ.
ಭಗತ್ ಸಿಂಗ್ ಅವರು ದೇಶವನ್ನು ಸ್ವಾತಂತ್ರಗೊಳಿಸುವುದಕ್ಕಾಗಿ ಪ್ರಾಣ ತ್ಯಜಿಸಿದರು, ಆದರೆ ಕನ್ಹಯ್ಯ ಭಾರತ ನೀಡಿದ ಸ್ವಾತಂತ್ರ್ಯವನ್ನು ಬಳಸಿ ತನ್ನ ರಾಜಕೀಯ ಗುರಿ ಸಾಧನೆಗಾಗಿ ಹವಣಿಸುತ್ತಿದ್ದಾನೆ ಎಂದು ಮತ್ತೊಬ್ಬ ಜರಿದಿದ್ದಾನೆ.
ಶಶಿ ತರೂರ್ ಅವರ ಐಕ್ಯೂ ಮಟ್ಟವನ್ನು ರಾಹುಲ್ ಗಾಂಧಿಯವರೊಂದಿಗೆ ಹೋಲಿಸಲು ಇದು ಸೂಕ್ತ ಸಮಯ, ಕನ್ಹಯ್ಯನನ್ನು ಭಗತ್ ಸಿಂಗ್ ಎಂದುಕೊಂಡಿರುವ ತರೂರ್ ರಾಹುಲ್ ಅವರನ್ನು ಐನ್ಸ್ಟೇನ್ ಎಂದುಕೊಂಡಿರಬಹುದು.
ಕನ್ಹಯ್ಯನನ್ನು ಭಗತ್ ಸಿಂಗ್ಗೆ ಹೋಲಿಕೆ ಮಾಡಿರುವ ನಿಮಗೆ ಸೋನಿಯಾ ಗಾಂಧಿಯವರನ್ನು ಇಶ್ರತ್ ಜಹಾನ್ಳಿಗೆ ಹೋಲಿಸುವ ಹಕ್ಕೂ ಇದೆ.
ಕನ್ಹಯ್ಯ ಭಗತ್ ಸಿಂಗ್ ಅವರ ಸ್ಲಿಪರ್ಗೂ ಹೋಲಿಕೆಯಾಗಲಾರ
ಎಂಬಿತ್ಯಾದಿ ಆಕ್ರೋಶಗಳು ಟ್ವಿಟರ್ನಲ್ಲಿ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.