ಕರಾಚಿ: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿದ್ದಾರೆ, ಇಲ್ಲಿ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಸಾರ್ವತ್ರಿಕ ರಜೆ ಮಾತ್ರ ಇರಲಿಲ್ಲ.
ಆದರೀಗ ಆಶ್ಚರ್ಯಕರ ಬೆಳವಣಿಗೆಯಲ್ಲಿ ಅಲ್ಲಿನ ಸರ್ಕಾರ ಮಾ.24ರಂದು ಹೋಳೀ ಹಬ್ಬದ ದಿನ ಸಾರ್ವತ್ರಿಕ ರಜೆ ಎಂದು ಘೋಷಣೆ ಮಾಡಿದೆ.
ಇಲ್ಲಿಯ ತನಕ ಹೋಳಿ ಹಬ್ಬದ ದಿನ ಹಿಂದೂಗಳಿಗೆ ಮಾತ್ರ ರಜೆ ನೀಡಲಾಗುತ್ತಿತ್ತು, ಆದರೆ ಸಾರ್ವತ್ರಿಕ ರಜೆ ಘೋಷಣೆಯಾಗಿರುವುದರಿಂದ ಎಲ್ಲಾ ಧರ್ಮಿಯರೂ ಸೇರಿ ಹಬ್ಬ ಆಚರಿಸಬಹುದಾಗಿದೆ.
ಪಾಕಿಸ್ಥಾನದ ನ್ಯಾಷನಲ್ ಅಸೆಂಬ್ಲಿ ಹೋಳಿ, ದೀಪಾವಳಿ ಮತ್ತು ಈಸ್ಟರ್ ಹಬ್ಬಗಳಿಗೆ ಸಾರ್ವಜನಿಕ ರಜೆ ಎಂದು ರೆಸಲ್ಯೂಷನ್ ಪಾಸ್ ಮಾಡಿದೆ. ಈ ರೆಸಲ್ಯೂಷನನ್ನು ಹಿಂದೂ ಶಾಸಕ ರಮೇಶ್ ಕುಮಾರ್ ವಾಂಕ್ವನಿ ಪಾಸ್ ಮಾಡಿದ್ದಾರೆ.
ಪಾಕಿಸ್ಥಾನದಲ್ಲಿ ಶೇ.2ರಷ್ಟು ಹಿಂದೂಗಳಿದ್ದು, ಇವರಲ್ಲಿ ಹೆಚ್ಚಿನವರು ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಾರೆ. 1.6ರಷ್ಟು ಕ್ರಿಶ್ಚಿಯನ್ನರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.