ಉಡುಪಿ: ಮೇ ಅಂತ್ಯದೊಳಗೆ ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳಲಿವೆ. ಪಡುಬಿದ್ರಿ ವ್ಯಾಪ್ತಿಯಲ್ಲಿ ಮತ್ತು ಫ್ಲೈಓವರ್ ಕಾಮಗಾರಿ ನಡೆಯುವಲ್ಲಿ ಸ್ವಲ್ಪ ತಡವಾಗಬಹುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾಧಿಕಾರಿ ಡಾ| ವಿಶಾಲ್ ಆರ್. ಹೇಳಿದರು.
ರಜತಾದ್ರಿಯಲ್ಲಿ ಸೋಮವಾರ ನಡೆದ ಆರ್ಟಿಎ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಧಿಗಳನ್ನು ನಿಯಂತ್ರಿಸಲು ಅಗತ್ಯವಿರುವಲ್ಲಿ ರಿಫ್ಲೆಕ್ಟರ್ ಅಳಧಿವಡಿಸಲು ಸೂಚನೆ ನೀಡಲಾಗಿದೆ. ರಾ.ಹೆ.ಯಲ್ಲಿ ಸ್ಪೀಡ್ ಬ್ರೇಕರ್ ಹಾಕಲು ಅವಕಾಶವಿಲ್ಲ. ಅಂಬಲಪಾಡಿ, ಬ್ರಹ್ಮಾವರ ಬಳಿಯ ಹೆದ್ದಾರಿ ಸಮಸ್ಯೆ ಕುರಿತು ಆ ಭಾಗದ ಪ್ರಮುಖರೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದ ಡಿಸಿ, 2014 ನ. 26ರಿಂದ ಇದುವರೆಗೆ 11 ಆರ್ಟಿಎ ಸಭೆನಡೆಸಧಿಲಾಗಿದ್ದು, ಹಲವು ಸಮಯಧಿದಿಂದ ಬಾಕಿ ಇದ್ದ ಪ್ರಕರಣಧಿಗಳನ್ನು ಇತ್ಯರ್ಥಧಿಗೊಳಿಸಧಿಲಾಗಿದೆ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಾರಿಗೆ ಸಂಪರ್ಕ ಕಲ್ಪಿಸಧಿಲಾಗಿದೆ. 11 ಸಭೆಗಳಲ್ಲಿ 700 ಪ್ರಕರಣ ಇತ್ಯರ್ಥಧಿಪಡಿಸಧಿಲಾಗಿದ್ದು, ಇದು ರಾಜ್ಯಧಿದಲ್ಲೇ ಅತ್ಯಧಿಕ ಎಂದರು.
ಕೆಲವೆಡೆ ಅನಧಿಕೃತ ಆಟೋ ನಿಲ್ದಾಣಗಳನ್ನು ಆರಂಭಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುಧಿವುದು. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ರಸ್ತೆ ಇದ್ದು, ಸಾರ್ವಜನಿಕರ ಬೇಡಿಕೆ ಇದ್ದರೆ ಬಸ್ಗಳಿಗೆ ಪರವಾನಿಗೆ ನೀಡಲಾಗುವುದು ಎಂದರು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಬಿ. ಸುರೇಂದ್ರಪ್ಪ ಉಪಸ್ಥಿತರಿದ್ದರು.
23 ಹೊಸ ಪರವಾನಿಗೆ ಮಂಜೂರು : ಸಭೆಯಲ್ಲಿ 44 ಪ್ರಕರಣಗಳು ಇತ್ಯರ್ಥಕ್ಕೆ ಬಂದಿದ್ದು, ಅವುಗಳಲ್ಲಿ ಪರವಾನಿಗೆ ವಿಭಿನ್ನತೆ ಒಟ್ಟು 12 ಮಂಜೂರು ಮಾಡಲಾಗಿದ್ದು, 1 ತಿರಸ್ಕೃತಗೊಂಡಿದೆ. ಹೊಸ ಪರವಾನಿಗೆ 23ಕ್ಕೆ ಮಂಜೂರಾತಿ ಮಾಡಲಾಗಿದೆ. ನವೀಕರಣ ಮಂಜೂರು 1ಕ್ಕೆ ನೀಡಲಾಗಿದೆ.
ಜೆನರ್ಮ್ ಬಸ್ ನಿಲ್ದಾಣಕ್ಕೆ ಟೆಂಡರ್ : ಜೆನರ್ಮ್ ಯೋಜನೆಯಡಿ ಮಂಜೂರುಗೊಂಡಿರುವ ಬಸ್ಗಳು ಇನ್ನೆರಡು ತಿಂಗಳಲ್ಲಿ ಉಡುಪಿಗೆ ಬರಲಿವೆ. ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ. ಹಳೆಯ ಬಿಇಒ ಕಚೇರಿ ಸ್ಥಳವು (ಉಡುಪಿ ಸಿಟಿ ಬಸ್ ನಿಲ್ದಾಣದ ಪಶ್ಚಿಮ ಭಾಗಧಿದಲ್ಲಿದೆ) ಕೆಎಸ್ಧಿಆರ್ಟಿಸಿ ಸುಪರ್ದಿಗೆ ಬಂದಿದ್ದು, ಅಲ್ಲಿ ನರ್ಮ್ ಬಸ್ ನಿಲ್ದಾಣ ಆರಂಭಿಸುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಉಡುಪಿಯ ಮೂಡನಿಡಂಬೂರು ಗ್ರಾಮದ ಬನ್ನಂಜೆಯಲ್ಲಿರುವ ಸರಕಾರಿ ಭೂಮಿಯಲ್ಲಿ ಕೆಎಸ್ಧಿಆರ್ಟಿಸಿ ಇಂಟರ್ಸಿಟಿ ಬಸ್ ನಿಲುಗಡೆಗೆ ಬಳಸಿಕೊಳ್ಳಲಾಗುವುದು. ಹಾಗೆಯೇ ನಿಟ್ಟೂರಿನಲ್ಲಿರುವ ಕೆಎಸ್ಆರ್ಟಿಸಿ ಡಿಪೋವನ್ನು ಕೂಡ ಉಪಯೋಗಿಸಿಕೊಳ್ಳಲಾಗುವುದು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.