ನವದೆಹಲಿ: ಸಾರ್ವಜನಿಕವಾಗಿ ’ಭಾರತ್ ಮಾತಾ ಕಿ ಜೈ’ ಪಠಣ ಮಾಡುವುದು ನಮ್ಮ ಸ್ವಂತ ಆಯ್ಕೆ ಎಂದು ಮಾಜಿ ಕಾನೂನು ಸಚಿವ ಹಾಗೂ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ ಇಂದಿನ ಪೀಳಿಗೆಯ ಯುವಜನತೆಗೆ ಭಾರತ ಮಾತೆಯನ್ನು ಗೌರವಿಸುವುದನ್ನು ಕಲಿಸಬೇಕು ಎಂದು ಸಲಹೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಖುರ್ಷದ್ ನಾವು ವಂದೇ ಮಾತರಂ ಎಂದು ಹೇಳಲು, ರಾಷ್ಟ್ರ ಧ್ವಜ ನೋಡಲು ಮತ್ತು ರಾಷ್ಟ್ರ ಗೀತೆ ಹಾಡಲು ಹೆಮ್ಮೆ ಪಡುತ್ತೇವೆ. ಆದರೆ ಕೆಲವರು ಅದನ್ನು ಬಯಸುವುದಿಲ್ಲ. ಅದು ಅವರ ಇಷ್ಟ ಅಥವಾ ಆಯ್ಕೆ ಎಂದು ಹೇಳಿದ್ದಾರೆ.
ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಅಸಾಸುದ್ದಿನ್ ಒವೈಸಿ ತನಗೆ ಚಾಕು ತೋರಿಸಿದರೂ ಭಾರತ್ ಮಾತಾ ಕಿ ಜೈ ಎಂದು ಹೇಳಲಾರೆ ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.