ನವದೆಹಲಿ: ’ಇನ್ಸ್ಪೆಕ್ಟರ್ ರಾಜ್’ ಕೊನೆಗೊಳಿಸುವುದರೊಂದಿಗೆ ಆಭರಣ ಮತ್ತಿತರ ಉತ್ಪನ್ನಗಳನ್ನು ಕಡ್ಡಾಯ ಪ್ರಮಾಣಿತ ಆಳ್ವಿಕೆ ಅಡಿ ತರುವ ಮೂಲಕ 30 ವರ್ಷಗಳಷ್ಟು ಹಳೆಯ ಭಾರತೀಯ ಗುಣಮಟ್ಟ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ.
ರಾಜ್ಯಸಭೆಯಲ್ಲಿ ಭಾರತೀಯ ಗುಣಮಟ್ಟ ಕಾಯ್ದೆ 2015ಕ್ಕೆ ಕೆಲವು ತಿಡ್ಡುಪಡಿ ತರುವ ಮೂಲಕ ಲೋಕ ಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ. ಆಗಸ್ಟ್ 2015ರಲ್ಲಿ ಲೋಕಸಭೆಯಲ್ಲಿ ಮಂಜೂರಾಗಿದ್ದ ಈ ಕಾಯ್ದೆ, ಕಳದ ವಾರ ಇಬ್ಬರು ಸದಸ್ಯರು ತಮ್ಮ ತಿದ್ದುಪಡಿ ಹಿಂಪಡೆದ ಬಳಿಕ ರಾಜ್ಯಸಭೆಯಲ್ಲಿ ಮಂಜೂರು ಮಾಡಲಾಗಿತ್ತು.
ಪ್ರಸ್ತುತ 92 ಉತ್ಪನ್ನಗಳು ಈ ಪ್ರಮಾಣಿತ ಆಳ್ವಿಕೆ ಅಡಿಯಲ್ಲಿ ಇದ್ದು, ಉತ್ಪನ್ನಗಳು ಮತ್ತು ವ್ಯವಸ್ಥೆಗಳು ಮಾತ್ರ ಗುಣಮಟ್ಟ ಪರಿಧಿಯ ಅಡಿಯಲ್ಲಿ ಬರುತ್ತವೆ. ಈ ಮಸೂದೆ ವಸ್ತುಗಳು ಮತ್ತು ಪ್ರಕ್ರಿಯೆಗಳ ಜೊತೆ ಸೇವೆಗಳನ್ನು ಸೇರಿಸಲು ಪ್ರಸ್ತಾಪಿಸುತ್ತದೆ. ಈ ಮಸೂದೆ ಅಮೂಲ್ಯ ಲೋಹಗಳ ಕಡ್ಡಾಯ ಐಎಸ್ಐ (ISI) ಮುದ್ರೆಗೆ ಮಾಡುವಂತೆ ಸೂಚಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.