ಜೈಪುರ: ಸೌರವಿದ್ಯುತ್ ಬಳಸುತ್ತಿರುವ ದೇಶದ ಹಲವು ನಿಲ್ದಾಣಗಳ ಪಟ್ಟಿಗೆ ಈಗ ಜೈಪುರ ಸೇರಿಕೊಂಡಿದೆ. ಈ ಯೋಜನೆಯನ್ನು ವಾಯವ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅನಿಲ್ ಸಿಂಘಾಲ್ ಉದ್ಘಾಟಿಸಿದ್ದಾರೆ.
ಜೈಪುರ ರೈಲು ನಿಲ್ದಾಣದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದ್ದು, 260 ಯೂನಿಟ್ಗಳಷ್ಟು ವಿದ್ಯುತ್ ಉಪ್ದಾದಿಸಲಾಗುತ್ತಿದೆ. ಇದು ನಿಲ್ದಾಣದ ದೈನಂದಿನ ಬಳಕೆ ಸಾಮರ್ಥ್ಯಕ್ಕಿಂತ 35 ಯೂನಿಟ್ ಅಧಿಕ ವಿದ್ಯುತ್ ಪೂರೈಸುತ್ತಿದೆ.
ಸೌರ ವಿದ್ಯುತ್ನಿಂದ ಜೈಪುರ ರೈಲು ನಿಲ್ದಾಣಕ್ಕೆ ವಾರ್ಷಿಕ 7.2 ಲಕ್ಷ ವಿದ್ಯುತ್ ಬಿಲ್ ಉಳಿತಾಯವಾಗಲಿದೆ ಎಂದು ಸಿಂಘಾಲ್ ಹೇಳಿದ್ದಾರೆ. ವಾರ್ಷಿಕ ೫೦ ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು, ಭವಿಷ್ಯದಲ್ಲಿ ಇದನ್ನು ದುಪ್ಪಟ್ಟು ಮಾಡುವ ಯೋಜನೆ ಇದೆ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಕೇರಳದ ಕೊಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೌರ ವಿದ್ಯುತ್ ಅಳವಡಿಸಲಾದ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ. ಇಲ್ಲಿ ಪ್ರತಿ ನಿತ್ಯ ೧೨ ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದಿಸಲಾಗುತ್ತದೆ.
ಹೈದರಾಬಾದ್ನ ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ೫ ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಿದ್ದು ಪ್ರತಿ ನಿತ್ಯ 25,000 ಯೂನಿಟ್ ಉತ್ಪಾನೆಯಾಗುತ್ತಿದೆ. ಇದು ವಿಮಾನ ನಿಲ್ದಾಣದ ಶೇ. 20ರಷ್ಟು ವಿದ್ಯುತ ಬಳಕೆಯನ್ನು ಪೂರೈಸುತ್ತದೆ. ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2.14 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ.
ಪುದುಚೆರಿಯ ಶ್ರೀ ಅರೊಬಿಂದೊ ಅಂತಾರಾಷ್ಟ್ರೀಯ ಶಿಕ್ಷಣ ಕೇಂದ್ರ ಸ್ವಾವಲಂಬಿಯಾಗಿ ಸೌರ ವಿದ್ಯುತ್ ಘಟಕ ಸ್ಥಾಪಿಸಿದ ಭಾರತ ಪ್ರಥಮ ಶಿಕ್ಷಣ ಸಂಸ್ಥೆಯಾಗಿದೆ ಎಂದು ಹೇಳಲಾದೆ. ಈ ಸಂಸ್ಥೆ 45 ಕಿಲೋ ವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುತ್ತಿದ್ದು, ತನ್ನ ಆವಶ್ಯಕತೆಗಿಂತ ಮೂರು ಪಟ್ಟು ಅಧಿಕವಾಗಿದೆ ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.