ಕಲ್ಬುರ್ಗಿ: ಕಲ್ಬುರ್ಗಿ ಜಿಲ್ಲೆಯ ಅಪ್ಜಲ್ಪುರ ತಾಲೂಕಿನ ಗೌರ್ ಗ್ರಾಮದ ಭೂಗರ್ಭದೊಳಗೆ ಶಿವಲಾಯವೊಂದು ಪತ್ತೆಯಾಗಿದ್ದು, ಭಾರೀ ಕುತೂಹಲ ಕೆರಳಿಸಿದೆ. ವಿಚಿತ್ರವೆಂದರೆ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಕಂಡ ಕನಸಿನಂತೆ ಭೂಮಿಯನ್ನು ಅಗೆದಾಗ ಇದು ಪತ್ತೆಯಾಗಿದೆ.
ಸುನೀಲ್ ದಫೇದಾರ್ ಎಂಬ ವ್ಯಕ್ತಿಯ ಜಮೀನಿನಲ್ಲಿ ಶಿವಲಿಂಗ ಇರುವುದಾಗಿ ಇವರಿಗೆ ಕನಸಿನಲಿ ಶ್ರೀಶೈಲ ಮಲ್ಲಿಕಾರ್ಜುನ ತಿಳಿಸಿದನಂತೆ, ಅದರಂತೆ ಇವರು ವಿಷಯವನ್ನು ಗ್ರಾಮಸ್ಥರಲ್ಲಿ ತಿಳಿಸಿದ್ದಾರೆ. ಆದರೆ ಗ್ರಾಮಸ್ಥರು ಆಸಕ್ತಿ ತೋರಿಸದೇ ಇದ್ದಾಗ ತಾವೇ ಭೂಮಿ ಅಗೆಯಲು ಮುಂದಾಗಿದ್ದಾರೆ.
ಬಳಿಕ ಸ್ವಾಮೀಜಿ ಗ್ರಾಮಸ್ಥರು ಸಹಾಯ ಮಾಡಲು ಮುಂದಾಗಿದ್ದಾರೆ, ಭೂಮಿಯನ್ನು ಅಗೆದಾಗ ಎಲ್ಲರಿಗೂ ಅಶ್ಚರ್ಯ ಕಾದಿತ್ತು. 30 ಅಡಿ ಆಳದಲ್ಲಿ ಭೂಮಿಯೊಳಗೆ ಶಿವಲಿಂU, ನಾಗದೇವತೆ ಮತ್ತು ಭ್ರಮರಾಂಬಿಕೆ ದೇವಿಯ ವಿಗ್ರಹ ಇರುವುದು ಪತ್ತೆಯಾಗಿದೆ.
ಇಲ್ಲಿ ದೊರೆತ ಶಿವಲಿಂಗ ಶ್ರೀಶೈಲದ ಶಿವಲಿಂಗವನ್ನೇ ಹೋಲುತ್ತಿದೆ. ಇದೊಂದು ಪುರಾತನ ದೇವಾಲಯ ಎಂದು ತಜ್ಞರು ಹೇಳಿದ್ದು, ಈ ಬಗ್ಗೆ ಹೆಚ್ಚಿನ ಉತ್ಖನನ ಆಗಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.