ತಿರುವನಂಪುರಂ: ಮೇ 16ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ಆರಂಭಿಸಿದೆ, ಈ ಸಲವಾದರೂ ಅಕೌಂಟ್ ಓಪನ್ ಮಾಡುವ ಭರವಸೆ ಹೊಂದಿರುವ ಅದು ಭಾನುವಾರ ತನ್ನ ೨೨ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ.
ಕೇರಳ ಬಿಜೆಪಿಯ ರಾಜ್ಯಾಧ್ಯಕ್ಷ ಕುಮ್ಮನಮ್ ರಾಜಶೇಖರನ್ ತಿರುವನಂತಪುರಂನ ವಟ್ಟಿಯೂರುಕಾವಿನಲ್ಲಿ ಸ್ಪರ್ಧೆಗಳಿಯಲಿದ್ದಾರೆ, ಮಾಜಿ ಕೇಂದ್ರ ಸಚಿವ ಓ.ರಾಜಗೋಪಾಲ್ ನೆಮೊಮ್ನಿಂದ ಅದೃಷ್ಟಪರೀಕ್ಷೆಗಿಳಿಯಲಿದ್ದಾರೆ.
ಕೆ.ಸುರೇಂದ್ರನ್ ಮಜೇಶ್ವರದಿಂದ, ಶೋಭ ಸುರೇಂದ್ರನ್ ಪಲಕ್ಕಾಡ್ನಿಂದ, ಸಿಕೆ ಪದ್ಮನಾಭಮ್ ಕುಮ್ಮಮಂಗಲಮ್ಬಿಂದ ಪಿಕೆ ಸುರೇಂದ್ರನ್ ಪಿಳೈ ಚೆಂಗನ್ನೂರ್ನಿಂದ, ಟಂಟಿ ರಮೇಶ್ ಅರ್ನಮುಲದಿಂದ, ವಿ ಮುರಳೀಧರನ್ ಕಝಕೂಟಂನಿಂದ, ಪಿಕೆ ಕೃಷ್ಣದಾಸ್ ಕಟ್ಟಕಡದಿಂದ ಸ್ಪರ್ದ್ದಿಸಲಿದ್ದಾರೆ.
ಕೇರಳದ ಪ್ರಬಲ ಹಿಂದುಳಿದ ವರ್ಗ ಈಝವ ಸಮುದಾಯದ ಸಂಸ್ಥೆಯಾದ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಸ್ಥಾಪಿಸಿರುವ ನೂತನ ಪಕ್ಷ ’ಭಾರತ್ ಧರ್ಮ ಜನಸೇನಾ’ದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.