ಶ್ರೀನಗರ: ಪದೇ ಪದೇ ಭಾರತದ ಗಡಿಭಾಗಕ್ಕೆ ನುಗ್ಗಿ ಭಾರತದ ತಾಳ್ಮೆ ಪರೀಕ್ಷಿಸುತ್ತಿದ್ದ ಚೀನಾ ಸೇನೆ ಇದೀಗ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಗಡಿಭಾಗದಲ್ಲಿ ಬೀಡು ಬಿಟ್ಟಿದೆ. ಇದು ಸಹಜವಾಗಿಯೇ ಭಾರತದ ಆತಂಕಕ್ಕೆ ಕಾರಣವಾಗಿದೆ.
ನೌವ್ ಗಾಮ್ ಸೆಕ್ಟರ್ನಲ್ಲಿ ಚೀನಾ ಸೇನೆಯ ಅಧಿಕಾರಿಗಳು ಕಾಣಿಸಿಕೊಂಡಿದ್ದಾರೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಾಗಿ ಚೀನಾ ಸೈನಿಕರು ಬಂದಿದ್ದರು ಎಂದು ವರದಿಗಳು ತಿಳಿಸಿವೆ. ಆದರೆ ಈ ವಿಚಾರದಲ್ಲಿ ಪಾಕಿಸ್ಥಾನ ಗೌಪ್ಯತೆಯನ್ನು ಕಾಪಾಡಿದ್ದು, ಭಾರತಕ್ಕೆ ಯಾವುದೇ ಸುಳಿವು ಸಿಗದಂತೆ ಮಾಡಲು ಪ್ರಯತ್ನಿಸಿದೆ.
ಆದರೆ ಭಾರತೀಯ ಗುಪ್ತಚರ ಇಲಾಖೆ ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಿದ್ದು, ಇದರ ಅನ್ವಯ ಪಾಕಿಸ್ಥಾನವೇ ಚೀನಾ ಅಧಿಕಾರಿಗಳನ್ನು ಗಡಿಗೆ ಕರೆಯಿಸಿಕೊಂಡಿದೆ.
ಭಾರತ-ಪಾಕಿಸ್ಥಾನ ಗಡಿಯಲ್ಲಿ ನಡೆಯುತ್ತಿರುವ ಈ ಸಂಶಯಾಸ್ಪದ ಬೆಳವಣಿಗೆ ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಈ ಎಲ್ಲಾ ಬೆಳವಣಿಗೆಯನ್ನೂ ಭಾರತ ಅತಿಸೂಕ್ಷ್ಮವಾಗಿ ಗಮನಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.