ನವದೆಹಲಿ: ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಭಾಗಿಯಾದ ವಿಶ್ವ ನಾಯಕರುಗಳು ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಕಾರ್ಯವನ್ನು ಶ್ಲಾಘಿಸಿದರು, ಮಾತ್ರವಲ್ಲ ತಮ್ಮ ದೇಶಕ್ಕೆ ಬರುವಂತೆ ಅವರಿಗೆ ಆಹ್ವಾನ ನೀಡಿದರು.
ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ತಮ್ಮ ದೇಶಕ್ಕೆ ಬಂದು ಸಂಸತ್ತಿನ ಕೆಳಮನೆ ಹೌಸ್ ಆಫ್ ಕಾಮನ್ನನ್ನು ಉದ್ದೇಶಿಸಿ ಮಾತನಾಡುವಂತೆ ರವಿಶಂಕರ್ ಅವರಿಗೆ ಮನವಿ ಮಾಡಿದ್ದಾರೆ.
’ಜನ ಹೇಳುತ್ತಾರೆ ಒಬ್ಬ ವ್ಯಕ್ತಿ ವಿಶ್ವವನ್ನು ಬದಲಾಯಿಸಬಲ್ಲ ಎಂದು, ಆದರೆ ಶ್ರೀ ಶ್ರೀ ಈ ನಿಟ್ಟಿನಲ್ಲಿ ಉತತ್ಮ ಆರಂಭವನ್ನೇ ಮಾಡಿದ್ದಾರೆ. ಆರ್ಟ್ ಆಫ್ ಲಿವಿಂಗ್ ಶಾಂತಿ ಮತ್ತು ಸಾಮರಸ್ಯವನ್ನು ಪ್ರಪಂಚಕ್ಕೆ ಸಾರುತ್ತಿದೆ’ ಎಂದು ಕ್ಯಾಮರೂನ್ ಅಭಿಪ್ರಾಯಿಸಿದ್ದಾರೆ.
ಆಸ್ಟ್ರೇಲಿಯಾ ಪ್ರಧಾನಿ ಮಲ್ಕೊಂಮ್ ಟರ್ನ್ಬುಲ್ ಅವರು ಮುಂದಿನ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ತಮ್ಮ ದೇಶಕ್ಕೆ ಬರುವಂತೆ ಆರ್ಟ್ ಆಫ್ ಲಿವಿಂಗ್ಗೆ ಆಹ್ವಾನ ನೀಡಿದ್ದಾರೆ.
ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಭಾನುವಾರ ತೆರೆಬಿದ್ದಿದ್ದು, ವಿಶ್ವ ನಾಯಕರ ಶ್ಲಾಘನೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.