ನವದೆಹಲಿ: ಜೆಎನ್ಯು ಘಟನೆಗೆ ಸಂಬಂಧಿಸಿದಂತೆ ದೆಹಲಿಯಾದ್ಯಂತವಿರುವ ವಿವಿಧ ವಿಶ್ವವಿದ್ಯಾನಿಲಯಗಳ 600 ಶಿಕ್ಷಕರು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಬೆಂಬಲ ಸೂಚಿಸಿ ಪತ್ರ ಬರೆದಿದ್ದಾರೆ.
ಯುಜಿಸಿ ಸದಸ್ಯೆ ಇಂದ್ರಮೋಹನ್ ಅವರ ನೇತೃತ್ವದ ನ್ಯಾಷನಲ್ ಡೆಮಾಕ್ರಾಟಿಕ್ ಟೀಚರ್ಸ್ ಫ್ರಂಟ್ ಇರಾನಿಯವರಿಗೆ ಪತ್ರ ಬರೆದಿದ್ದು, ಜೆಎನ್ಯುನಲ್ಲಿ ಫೆ.9ರಂದು ನಡೆದ ಕಾರ್ಯಕ್ರಮವನ್ನು ರಾಜಕೀಯ ಪ್ರೇರಿತ ಗುಂಪುಗಳು ಪೂರ್ವ ನಿಯೋಜಿತವಾಗಿ ಆಯೋಜಿಸಿವೆ. ಆಡಳಿತವನ್ನು ಅಸ್ಥಿರಗೊಳಿಸುವುದೇ ಅವರ ಉದ್ದೇಶ ಎಂದಿದೆ.
ವಿದ್ಯಾರ್ಥಿ ಸಮೂಹದ ನಡುವೆ ಸಮಸ್ಯೆ, ಗೊಂದಲ ಸೃಷ್ಟಿಸಲು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಬಗ್ಗೆ ನಮ್ಮ ಕಾಳಜಿಯನ್ನು ವ್ಯಕ್ತಪಡಿಸಿ ಪತ್ರ ಬರೆದಿರುವುದಾಗಿ ಶಿಕ್ಷಕ ಸಂಘಟನೆ ಹೇಳಿದೆ.
ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ, ಆದರೆ ಜೆಎನ್ಯುನಲ್ಲಿ ನಡೆದದ್ದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ ಅಪರಾಧ, ಕ್ಷಮಿಸಲಾಗದ ಅಪರಾಧ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.