ಪಾಟ್ನಾ: ತಂತ್ರಜ್ಞಾನವನ್ನು ಸಕ್ರಿಯವಾಗಿ ಬಳಸಿಕೊಂಡಲ್ಲಿ ನ್ಯಾಯಾಲಯದಲ್ಲಿನ ವಾದ ಮತ್ತು ನ್ಯಾಯ ತೀರ್ಪಿನ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಪಾಟ್ನಾ ಹೈಕೋರ್ಟ್ನ ಶತಮಾನೋತ್ಸವ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
’ಈ ಹಿಂದೆ ಇಲ್ಲದ ಕೆಲವೊಂದನ್ನು ನಾವೀಗ ಹೊಂದಿದ್ದೇವೆ ಅದುವೇ ತಂತ್ರಜ್ಞಾನ ಶಕ್ತಿ, ಬಾರ್, ಬೆಂಚ್, ಕೋರ್ಟ್ ಹೀಗೆ ಎಲ್ಲವನ್ನೂ ತಂತ್ರಜ್ಞಾನಗೊಳಿಸೋಣ ಬನ್ನಿ’ ಎಂದು ಕರೆ ನಿಡಿದರು.
’ಕಳೆದ 100 ವರ್ಷದಲ್ಲಿ ಈ ಹೈಕೋರ್ಟ್ ಉನ್ನತ ಮಟ್ಟಕ್ಕೇರಿದೆ. ಮುಂಬರುವ ವರ್ಷಗಳಲ್ಲೂ ಉತ್ತಮವಾದದನ್ನೆ ಮಾಡಿಕೊಂಡು ಬರಲಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.
ತಮ್ಮ ಬಳಿ ವಿಚಾರಣೆಗೆ ಪೆಂಡಿಂಗ್ ಇರುವ 40, 50 ವರ್ಷ ಹಳೆಯ ಪ್ರಕರಣಗಳ ಮಾಹಿತಿಯನ್ನೊಳಗೊಂಡ ಮ್ಯಾಗಜೀನ್ನನ್ನು ಪ್ರತಿವರ್ಷ ನ್ಯಾಯಾಲಯಗಳು ಹೊರ ತಂದರೆ ಉತ್ತಮ ಎಂದು ನನಗನಿಸುತ್ತದೆ, ಇದರಿಂದ ಜನಸಾಮಾನ್ಯರಿಗೆ ಪೆಂಡಿಂಗ್ ಕೇಸ್ಗಳ ಬಗ್ಗೆ ಅರಿವು ಮೂಡುತ್ತದೆ. ಪೆಂಡಿಂಗ್ನ್ನು ಮುಕ್ತಗೊಳಿಸಲು ಆಗ ಹೊಸ ಹೊಸ ಆಲೋಚನೆಗಳು ಅವರಿಗೆ ಹೊಳೆಯಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೂ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.