ನವದೆಹಲಿ: ಪ್ರಸ್ತುತ ಇರುವ ಇಂಡಿಯಾ ಹೆಸರನ್ನು ’ಭಾರತ’ ಎಂದು ಮರುನಾಮಕರಣ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ದಯವಿಟ್ಟು ಭಾವನಾತ್ಮಕ ಸಮಸ್ಯೆಗಳನ್ನು ನ್ಯಾಯಾಲಯದ ಮುಂದಿಡಬೇಡಿ. ಭಾರತ ಎಂದು ಕರೆದಲ್ಲಿ ಯಾವುದೇ ತಪ್ಪಿಲ್ಲ. ಕಾನೂನು ನಿಯಮದೊಂದಿಗೆ ಬಡವರಿಗೆ ಸಹಕರಿಸಿ ಎಂದು ನ್ಯಾ. ಪಿ.ಎಸ್. ಠಾಕೂರ್ ಮತ್ತು ಯು.ಯು. ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ, ಅರ್ಜಿದಾರ ನಿರಂಜನ್ ಭಟ್ವಾಳ್ಗೆ ಸೂಚಿಸಿದೆ.
ಈ ದೇಶವನ್ನು ಇಂಡಿಯಾ ಅಥವಾ ಭಾರತ್ ಎಂಬ ಯಾವುದೇ ಹೆಸರಿನಲ್ಲಿ ಕರೆದರೂ ಅದು ಬದಲಾಗುವುದಿಲ್ಲ ಎಂದು ಈ ವೇಳೆ ಪೀಠ ಹೇಳಿದೆ.
ಕಳೆದ ಎಪ್ರಿಲ್ನಲ್ಲಿ ಮುಖ್ಯ ನ್ಯಾ. ಎಚ್.ಎಲ್. ದತ್ತು ಅವರನ್ನೊಳಗೊಂಡ ಪೀಠ ಭಟ್ವಾಳ್ ಅವರ ಅರ್ಜಿ ವಿಚಾರಣೆಗೆ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ಪಂದಿಸಬೇಕು ಎಂದು ಹೇಳಿತ್ತು. ಸಂವಿಧಾನ ರಚನಾ ಸಮಿತಿ ಅಧಿಕೃತವಾಗಿ ’ಭಾರತ’ ಹೆಸರನ್ನು ಪಡೆದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.