ನವದೆಹಲಿ: ವಿಮಾನ ಪ್ರಯಾಣದಲ್ಲಿ ವಿಳಂಬ, ಸರಕುಗಳು ಕಳೆದುಕೊಂಡಲ್ಲಿ ಪ್ರಯಾಣಿಕರಿಗೆ ಇನ್ನು ಮುಂದೆ ವಿಮಾನಯಾನ ಹೆಚ್ಚಿನ ಪರಿಹಾರ ಧನ ನೀಡಲಿದೆ. ಪ್ರಯಾಣಿಕರು ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ಸುಮಾರರು 1 ಕೋಟಿ ರೂ. ವರೆಗಿನ ಪರಿಹಾರ ನೀಡುವ ಬಿಲ್ನ್ನು ರಾಷ್ಟ್ರಪತಿ ರಾಜ್ನಾಥ್ ಸಿಂಗ್ ಅವರು ಅನುಮೋದನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (Special Drawing Rights) ಆಧಾರದಲ್ಲಿ ಪರಿಹಾರ ಧನ ನೀಡಲಾಗುವುದು. ಇದು ಡಾಲರ್, ಯೆನ್, ಯೂರೋ ಮತ್ತಿತರ ಕರೆನ್ಸಿ ಮೌಲ್ಯಗಳ ಮಾರುಕಟ್ಟೆ ದರಗಳನ್ನು ಆಧರಿಸಿದೆ. ಇದು ಮಾಂಟ್ರಿಯಲ್ ಕನ್ವೆನ್ಷನ್ ಸಾಲಿನ ವಿಮಾನಯಾನ ಹೊಣೆಗಾರಿಕೆ ಮಿತಿಯನ್ನು ಸುಧಾರಿಸಲು ಸರ್ಕಾರಕ್ಕೆ ಸಹಾಯಕವಾಗಲಿದೆ.
ವಿಮಾನ ಸಮಯ ವಿಳಂಭವಾದಲ್ಲಿ ಪ್ರಯಾಣಿಕರಿಗೆ 4,150 ಎಸ್ಡಿಆರ್ನಿಂದ 4,694 ಎಸ್ಡಿಆರ್ಗೆ ಏರಿಸಲು ಪ್ರಸ್ತಾಪಿಸಲಾಗಿದೆ. ಇದೇ ವೇಳೆ ವಿಮಾನ ವಿಳಂಬ, ಸರಕುಗಳ ನಾಶ, ಹಾನಿ ಅಥವಾ ಜೀವಹಾನಿ ಸಂಭವಿಸಿದಲ್ಲಿ 1000 ಎಸ್ಡಿಆರ್ನಿಂದ 1,131 ಎಸ್ಡಿಆರ್ ವರೆಗಿನ ಪರಿಹಾರ ನೀಡಲು ಉದ್ದೇಶಿಸಲಾಗಿದೆ.
ಈ ಬಿಲ್ನ್ನು 2015ರ ಡಿಸೆಂಬರ್ನಲ್ಲಿ ಅಂಗೀಕರಿಸಲಾಗಿದ್ದು, ಕೆಲವು ತಿದ್ದುಪಡಿಗಳೊಂದಿಗೆ ಮಾರ್ಚ್ 2ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ಇದೀಗ ಮತ್ತೆ ಈ ಬಿಲ್ನ್ನು ಲೋಕಸಭೆಯಲ್ಲಿ ಪಡೆಯಲಾಗಿದ್ದು, ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಜಾರಿಗೆ ಬರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.