ಬೆಂಗಳೂರು : ರಾಜ್ಯ ಸರಕಾರವು ತನ್ನ ಮುಂಗಡ ಪತ್ರವನ್ನು ಮಾ. 18 ರಂದು ಮಂಡಿಸಲಿದೆ. ಮುಖ್ಯಮಂತ್ರಿಗಳ ಬಳಿ ಹಣಕಾಸು ಖಾತೆ ಇರುವುದರಿಂದ ಸಿಎಂ ಸಿದ್ದರಾಮಯ್ಯ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ.
ಈ ಬಾರಿ ಸಿಎಂ ಸಿದ್ದರಾಮಯ್ಯ ಮುಂಗಡ ಪತ್ರವನ್ನು ಮಂಡಿಸಿದರೆ ಅವರು 10 ನೇ ಬಾರಿಗೆ ಮುಂಗಡ ಪತ್ರವನ್ನು ಮಂಡಿಸಿದಂತಾಗುತ್ತಿದೆ. ತೆರಿಗೆ ನಿರೀಕ್ಷಿತ ಮಟ್ಟದಲ್ಲಿಲ್ಲದಿದ್ದರೂ ತಕ್ಕ ಮಟ್ಟಿಗೆ ಗುರಿಮುಟ್ಟಿದ್ದು, ಅಬಕಾರಿ ಇಲಾಖೆ ತೆರಿಗೆ ಸಂಗ್ರಹದಲ್ಲಿ ಗುರಿಮುಟ್ಟಿದೆ. ಬಿಬಿಎಂಪಿ ಕೂಡಾ ತಕ್ಕಮಟ್ಟಿಗೆ ಆಸ್ತಿತೆರಿಗೆ ಸಂಗ್ರಹಿಸಿದೆ.
ವಾಣಿಜ್ಯೋದ್ಯಮ ಚಟುವಟಿಕೆಗೆ ಪೂರಕ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ 2015-16 ನೇ ಸಾಲಿನ ಮುಂಗಡ ಪತ್ರದಲ್ಲಿ ಹೆಚ್ಚಿನ ಹಣ ನಿಗದಿಯಾಗಿದ್ದು, ಈ ಮೊತ್ತದಲ್ಲಿ ಭಾಗಶಃ ಹಣ ಇನ್ನೂ ವೆಚ್ಚವಾಗಿಲ್ಲ ಎಂದು ತಿಳಿದು ಬಂದಿದೆ.
ಸರಕಾರ ಹೊಸಕೈಗಾರಿಕಾ ನೀತಿ ಪ್ರಕಟಿಸದೆ. ಕೈಗಾರಿಕೆಗಳನ್ನು ಸೆಳೆಯಲು ಸರಕಾರ ಇನ್ವೆಸ್ಟ್ ಕರ್ನಾಟಕ ಸಮಾವೇಶವನ್ನು ಹಮ್ಮಿಕೊಂಡಿತ್ತು. ಇದರ ಪ್ರತಿಫಲವೇನು ಎಂದು ಮುಂಗಡಪತ್ರದ ಮಂಡನೆಯಿಂದ ತಿಳಿದು ಬರಲಿದೆ. ಸಿಎಂ ರಾಜ್ಯದ ಜನರಿಗೆ ಸಿಹಿಯನ್ನು ನೀಡುತ್ತಾರೋ ಕಹಿಯನ್ನು ನೀಡುತ್ತಾರೋ ಎಂಬುದು ಅಂದು ತಿಳಿದುಬರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.