ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾಜ್ಯಸಭೆಯನ್ನುದ್ದೇಶಿ ಭಾಷಣ ಮಾಡಿದರು.
ನಿನ್ನೆ ತಡರಾತ್ರಿಯವರೆಗೂ ಲೋಕಸಭೆ ಕಾರ್ಯನಿರ್ವಹಿಸಿದೆ, ನಡೆದ ಕೆಲಸದ ಬಗ್ಗೆ ಎಲ್ಲರಿಗೂ ಸಂತಸವಾಗಿದೆ. ರಾಷ್ಟ್ರಪತಿಗಳ ಮಾತನ್ನು ಸದನ ಗಂಭಿರವಾಗಿ ಪರಿಗಣಿಸಿದೆ. ಈ ವೇಳೆ 300 ತಿದ್ದುಪಡಿಗಳು ಅನುಮೋದನೆಗೊಂಡವು ಎಂದು ಹೇಳಲು ಸಂತಸವಾಗುತ್ತಿದೆ. ಕಲಾಪ ಸುಗಮವಾಗಿ ನಡೆಯಲು ಅನುವು ಮಾಡಿಕೊಡಿ ಎಂದು ಮತ್ತೆ ಮನವಿ ಮಾಡುತ್ತೇನೆ ಎಂದರು.
ಯಾರೊಬ್ಬರೂ ಸಾವಿನ ಬಗ್ಗೆ ಟೀಕಿಸುವುದಿಲ್ಲ, ಸತ್ತ ಕಾರಣದ ಎಂಬ ಬಗ್ಗೆಯೇ ಟೀಕಿಸುತ್ತಾರೆ. ಕಾಂಗ್ರೆಸ್ ಕೂಡ ಅದೇ ರೀತಿ, ಯಾವತ್ತೂ ಪ್ರತಿಪಕ್ಷಗಳ ಮೇಲೆ ದಾಳಿ ಎನ್ನಲಾಗುತ್ತದೆಯೇ ಹೊರತು ಕಾಂಗ್ರೆಸ್ ಮೇಲೆ ದಾಳಿ ಎನ್ನುವುದಿಲ್ಲ. ಕಾಂಗ್ರೆಸ್ ಎಂದಿಗೂ ಕೆಟ್ಟ ಹೆಸರು ಪಡೆಯುವುದಿಲ್ಲ ಎಂದರು.
ಕಾಂಗ್ರೆಸ್ ಅದೃಷ್ಟಶಾಲಿಯಾಗಿದೆ, ಅದರ ವೈಫಲ್ಯಗಳ ಬಗ್ಗೆ, ಕೊರತೆಗಳ ಬಗ್ಗೆ ಯಾರೂ ಟೀಕಿಸುವುದಿಲ್ಲ ಎಂದಿದ್ದಾರೆ.
ನಾವು ಹಲವಾರು ಮಸೂದೆಗಳನ್ನು ಅನುಮೋದನೆಗೊಳಿಸಲು ಎಂದು ದೇಶದ ಜನ ಬಯಸುತ್ತಿದ್ದಾರೆ, ಪೆಂಡಿಂಗ್ ಬಿಲ್ಗಳನ್ನು ಅನುಮೋದನೆಗೊಳಿಸುವುದರಿಂದ ದೇಶದ ಪ್ರಗತಿಗೆ ಸಹಾಯವಾಗುತ್ತದೆ.
ಪಾರದರ್ಶಕತೆ ಎಂಬುದು ಉತ್ತಮ ಆಡಳಿತದ ಹಾಲ್ಮಾರ್ಕ್, ವಿಕೇಂದ್ರೀಕರಣ, ನಿಖರತೆ ಕೂಡ. ನೈರ್ಮಲ್ಯವಿಲ್ಲದ ಕಾರಣ ಬಡವರು ಸಾಕಷ್ಟು ಹಣವನ್ನು ಔಷಧಿಗೆ ಹಾಕಬೇಕಾಗಿದೆ. ಸ್ವಚ್ಛತೆ ಈಗ ಸಾಮೂಹಿಕ ಚಳುವಳಿಯಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.