ನವದೆಹಲಿ: ಭಾರತೀಯ ವಾಯು ಸೇನೆಯು (ಐಎಎಫ್) ಜೂನ್ 18ರ ಒಳಗಾಗಿ ಮೊದಲ ಮಹಿಳಾ ಪೈಲಟ್ಗಳನ್ನು ಹೊಂದಲಿದೆ ಎಂದು ಭಾರರತೀಯ ವಾಯುಪಡೆ ಮುಖ್ಯಸ್ಥ ಅರುಣ್ ರಾಹಾ ಹೇಳಿದ್ದಾರೆ.
ಯುದ್ಧ ಪೈಲಟ್ಗಳಾಗಿ ಮಹಿಳೆಯರನ್ನು ಸೇರ್ಪಡೆಗೊಳಿಸುವ ಐಎಎಫ್ನ ಪ್ರಸ್ತಾಪಕ್ಕೆ ಅನುಮೋದನೆ ನೀಡಿರುವ ರಕ್ಷಣಾ ಸಚಿವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಮೂಲಕ ಮೊದಲ ಬಾರಿ ಭಾರತೀಯ ವಾಯು ಸೇನೆಯು (ಐಎಎಫ್) ಮಹಿಳಾ ಪೈಲಟ್ಗಳನ್ನು ಹೊಂದಲಿದೆ ಎಂದು ಅವರು ಹೇಳಿದ್ದಾರೆ.
ಮಹಿಳಾ ಪೈಲಟ್ಗಳು ಜೂನ್ 2016ರಿಂದ ಐಎಎಫ್ನಲ್ಲಿ ಕಾರ್ಯಾರಂಭಿಸಲಿದ್ದು, ಒಂದು ವರ್ಷದ ತರಬೇತಿ ಪಡೆಯಲಿದ್ದಾರೆ. ಜೂನ್ 2017ರ ಬಳಿಕ ಅವರು ಯುದ್ಧ ವಿಮಾನ ಪ್ರವೇಶಿಸಲಿದ್ದಾರೆ ಎಂದು ಅರುಣ್ ಹೇಳಿದ್ದಾರೆ.
ಆಡಳಿತ, ಪವನಶಾಸ್ತ್ರ, ಸಂಚರಣೆ, ಶಿಕ್ಷಣ, ವಾಯುಯಾನ ವಿಜ್ಞಾನ ಎಂಜಿನಿಯರಿಂಗ್, ಮೆಕ್ಯಾನಿಕಲ್ ಸೇರಿದಂತೆ ಏಳು ವಿಭಾಗಗಳಲ್ಲಿ ಮಹಿಳೆಯರು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಐಎಎಫ್ನ 1500 ಮಹಿಳೆಯರ ಪೈಕಿ 94 ಪೈಲಟ್ಗಳು ಹಾಗೂ 14 ಮಹಿಳಾ ನಾವಿಕರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.