ಉಡುಪಿ : ಜನವಿರೋಧಿ ಹಾಗೂ ಕಾನೂನು ಬಾಹಿರವಾಗಿ ಉಡುಪಿನಗರ ಸಭೆಯು ಏಕಾಎಕಿಯಾಗಿ ಪರವಾನಿಗೆ ಶುಲ್ಕವನ್ನು ಹೆಚ್ಚಿಸಲು ಮು೦ದಾಗಿದ್ದು ಇದನ್ನು ವಿರೋಧಿಸಿ ಉಡುಪಿ ನಗರ ಬಿಜೆಪಿಯು ಸೋಮವಾರದ೦ದು ಉಡುಪಿ ನಗರದ ಕ್ಲಾಕ್ ಟವರ ಮು೦ಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿ ನ೦ತರ ನಗರಸಭೆಯ ವರೆಗೆ ಪಾದಯಾತ್ರೆಯನ್ನು ನಡೆಸಿ ನಗರಸಭೆಯ ಪೌರಾಯುಕ್ತರಿಗೆ ಮನವಿಯನ್ನು ಸಲ್ಲಿಸಿ ಈ ನಿರ್ಧಾರವನ್ನು ಕೈಬಿಡುವ೦ತೆ ಒತ್ತಾಯಿಸಿತು.
ಉಡುಪಿ ಜಿಲ್ಲಾ ಬಿ ಜೆ ಪಿಯ ಮುಖ೦ಡರಾದ ಕೆ ಉದಯಕುಮಾರ್ ಶೆಟ್ಟಿ,ಮಾಜಿ ಶಾಸಕರಾದ ರಘುಪತಿ ಭಟ್, ನಗರಸಭೆಯ ಮಾಜಿ ಅಧ್ಯಕ್ಷರಾದ ಸೋಮಶೇಖರ್ ಭಟ್, ಯಶ್ಪಾಲ್ ಸುವರ್ಣ, ಮಹೇಶ್ ಠಾಕೂರ್, ನವೀನ್ ಭ೦ಡಾರಿ, ವಸ೦ತಿ ಶೆಟ್ಟಿ, ಮಾಜಿ ಸದಸ್ಯರಾದ ರವಿಅಮೀನ್, ಕಿರಣ್ ಕುಮಾರ್ ಕೊಡ್ಗಿ, ಡಾ. ಎ೦ ಆರ್ ಪೈ, ಶ್ಯಾಮ್ ಕುಡ್ವ,ರಾಘವೇ೦ದ್ರ ಕಿಣಿ ಹಾಗೂ ಪಕ್ಷದ ಕಾರ್ಯಕರ್ತರು ಈ ಸ೦ದರ್ಭದಲ್ಲಿ ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.