ಅಯೋಧ್ಯಾ: ಸಮಾಜವಾದಿ ಪಕ್ಷದ ಅಧಿನಾಯಕನಾಗಿರುವ ಮುಲಾಯಂ ಸಿಂಗ್ ಯಾದವ್ ಅವರ 76 ನೇ ಜನ್ಮದಿನದ ಪ್ರಯುಕ್ತ ಅವರ ಪಕ್ಷದ ಕಾರ್ಯಕರ್ತರು ಅಯೋಧ್ಯೆಯಲ್ಲಿ 77 ದಿನಗಳ ಯಜ್ಞವನ್ನು ನಡೆಸುತ್ತಿದ್ದಾರೆ.
ಮುಲಾಯಂ ತನ್ನ 76 ನೇ ಹುಟ್ಟು ಹಬ್ಬ ಆಚರಿಸಿಕೊಂಡ ನವೆಂಬರ್ 22 ರಂದು ಆರಂಭವಾದ ಈ ಯಜ್ಞ ಫೆ. 6 ರಂದು ಅಂತ್ಯಗೊಳ್ಳಲಿದೆ. ಅಯೋಧ್ಯೆಯ ಶ್ರೀ ಕೃಷ್ಣ ಗೌಶಾಲದಲ್ಲಿ ಯಜ್ಞ ನಡೆಯುತ್ತಿತ್ತು. ಹಲವಾರು ಅರ್ಚಕರು ಇದರಲ್ಲಿ ಪಾಲ್ಗೊಂಡಿದ್ದಾರೆ.
ಮುಲಾಯಂ ಅವರ ಆರೋಗ್ಯ ಮತ್ತು ಧೀರ್ಘ ಆಯುಷ್ಯಕ್ಕಾಗಿ ಈ ಯಜ್ಞವನ್ನು ನಡೆಸುತ್ತಿರುವುದಾಗಿ ಕಾರ್ಯಕರ್ತರು ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.