ಬೆಂಗಳೂರು : ಪ್ರತಿಷಿತ ಸಂಸ್ಥೆ ವಂಡರ್ಲಾ ಹಾಲಿಡೇಸ್ ಲಿಮಿಟೆಡ್ ಇದರ ವತಿಯಿಂದ ನೀಡಲಾಗುವ 2015-16ನೇ ಸಾಲಿನ ಪರಿಸರ ಸ್ನೇಹಿ ಪ್ರಶಸ್ತಿಯನ್ನು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಪಡೆದುಕೊಂಡಿದೆ. ವಿದ್ಯಾಕೇಂದ್ರದ ಪರಿಸರಕ್ಕೆ ಭೇಟಿ ನೀಡಿದ ಅಲ್ಲಿನ ತಂಡ ವಿದ್ಯಾಸಂಸ್ಥೆಯ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ಜೊತೆ ಜೊತೆಗೆ ಪ್ರಾಕೃತಿಕವಾಗಿಯೂ ಉತ್ತಮವಾದ ವಾತಾವರಣ ಇಲ್ಲಿರುವುದನ್ನು ಗಮನಿಸಿ ಈ ಪ್ರಶಸ್ತಿ ನೀಡಿದೆ.
ಶಿಶುಮಂದಿರ, ಪ್ರಾಥಮಿಕ ಹಾಗೂ ಫ್ರೌಢಶಾಲಾ ವಿಭಾಗಗಳಲ್ಲಿರುವ ಶಾಲಾ ಕೈತೋಟ, ಉದ್ಯಾನವನ, ಹಾಗೂ ಪಶು-ಪಕ್ಷಿಗಳ ಪಾಲನೆ ಪೋಷಣೆಗೆ ಅದರ ಸ್ವಚ್ಚತೆ, ರಕ್ಷಣೆ ಇತ್ಯಾದಿಗಳನ್ನು ಸೂಕ್ಷವಾಗಿ ತಂಡ ಪರಿಶೀಲಿಸಿದೆ. ನೀರಿನ ಸಮರ್ಪಕ ಬಳಕೆ ಹಾಗೂ ವಾತಾವರಣದಲ್ಲಿನ ಸ್ವಚ್ಚತೆಯನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಿದೆ.
ಫೆ.5 ರಂದು ಬೆಂಗಳೂರಿನ ವಂಡರ್ಲಾದ ಆವರಣದಲ್ಲಿ ಆಯೋಜನೆಯಾಗಿರುವ ಈ ಬೃಹತ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಈ ಪ್ರಶಸ್ತಿಗೆ ಭಾಜನರಾದ ವಿದ್ಯಾಸಂಸ್ಥೆಯನ್ನು ಶ್ರೀರಾಮ ಶಾಲಾಭಿವೃದ್ಧಿ ಸಮಿತಿಗಳು, ಸ್ಥಳೀಯ ಯುವಕ ಮಂಡಲಗಳು, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಅಪಾರ ಹಿರಿಯ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.