ಬೆಳ್ತಂಗಡಿ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ(ಸಿಬಿಎಸ್ಇ) ಶಾಲೆಯಲ್ಲಿ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಚೆಸ್ ಕ್ರೀಡಾಳು ಈಶಾ ಶರ್ಮ ಅವರು ಈ ವರ್ಷ ಇರಾನ್ ದೇಶದಲ್ಲಿ ನಡೆಯುವ 12 ನೇ ಏಷಿಯನ್ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್ನಲ್ಲಿ ಸ್ಪರ್ಧಿಸಲು ಆಯ್ಕೆಯಾಗಿರುತ್ತಾಳೆ ಎಂದು ಶಾಲಾ ಮುಖ್ಯೋಪಾಧ್ಯಾಯ ಮನಮೋಹನ್ ನಾಯಕ್ ತಿಳಿಸಿದರು.ಅವರು ಮಂಗಳವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈಶಾ 2015ರಲ್ಲಿ ಮಾಡಿರುವ ಸಾಧನೆಯನ್ನು ವಿವರಿಸಿದರು.
ಮೇ. 30 ರಿಂದ ಜೂ. 8 ರ ವರೆಗೆ ಸಿಂಗಾಪುರದಲ್ಲಿ ನಡೆದ ೧೧ನೇ ಏಷಿಯನ್ ಸ್ಕೂಲ್ ಆಫ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ, ಜ. 14 ರಿಂದ 15 ತನಕ ನಾಗಪುರದಲ್ಲಿ ನಡೆದ 5 ನೇ ರಾಷ್ಟ್ರೀಯ ಶಾಲಾ ಚೆಸ್ ಚಾಂಪಿಯನ್ ಶಿಪ್ ನಲ್ಲಿ ದ್ವಿತೀಯ ಸ್ಥಾನ, ಆ.28 ರಿಂದ 30 ರ ತನಕ ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಬಾಲಕಿಯರ ಚೆಸ್ ಚಾಂಪಿಯನ್ ಶಿಪ್ ನಲ್ಲಿ 5 ನೇ ಸ್ಥಾನ, ಅ. 3ರಂದು ಬೆಂಗಳೂರಿನಲ್ಲಿ ನಡೆದ ಬಿ.ಇ. ಆಫಿಸರ್ ಕ್ಲಬ್ 26 ನೇ ನ್ಯಾಶನಲ್ ಬಾಲಕಿಯರ ಚೆಸ್ ಚಾಂಪಿಯನ್ ಶಿಪ್ನಲ್ಲಿ 9 ನೇ ಸ್ಥಾನ ಪಡೆದಿದ್ದಾಳೆ.
ಅಲ್ಲದೆ ಜು. 23 ರಿಂದ 31 ರತನಕ ತಮಿಳುನಾಡಿನಲ್ಲಿ ನಡೆದ 45 ನೇ ನ್ಯಾಶನಲ್ ಜೂನಿಯರ್ ಚೆಸ್ ಚಾಂಪಿಯನ್ಶಿಪ್ ಮತ್ತು ಬಾಲಕಿಯರ ಚೆಸ್ ಚಾಂಪಿಯನ್ ಶಿಪ್ನಲ್ಲಿ, ಜು. 3 ರಿಂದ 11 ರತನಕ ಕೊರಿಯಾದಲ್ಲಿ ನಡೆದ ಏಶಿಯನ್ ಯೂತ್ ಚೆಸ್ ಚಾಂಪಿಯನ್ಶಿಪ್ನಲ್ಲಿ, ಡಿ.7 ರಿಂದ 12 ರತನಕ ನಡೆದ 7ನೇ ಪೆನಾಂಗ್ ಹೆರಿಟೇಜ್ ಸಿಟಿ ಇಂಟರ್ನ್ಯಾಶನಲ್ ಚೆಸ್ ಚಾಂಪಿಯನ್ ಶಿಪ್ನಲ್ಲಿ ಹಾಗೂ ಡಿ. 14 ರಿಂದ 15 ರತನಕ ಮಲೇಶಿಯಾದಲ್ಲಿ ನಡೆದ 2 ನೇ ಅಂತರಾಷ್ಟ್ರೀಯ ಚೆಸ್ ಮುಕ್ತ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದಾಳೆ ಎಂದರು.
17ವಯೋಮಿತಿಯ ಕೆಳಗಿನ ಚೆಸ್ ರೇಟಿಂಗ್ನಲ್ಲಿ 1927 ಸ್ಥಾನದಲ್ಲಿರುವ ಈಶಾ ಅವರು ಶಾಲಾ ಶಿಕ್ಷಣದಲ್ಲಿ ಮುಂದು ಹಾಗೂ ವಿದ್ಯಾರ್ಥಿಗಳಿಗೆ ಸ್ಪೂರ್ತಿ. ಇವಳ ಸಾಧನೆಯಿಂದಾಗಿ ಶಾಲೆಯ 2 ನೇ ತರಗತಿಯಿಂದ 10 ನೇ ತರಗತಿಯ ಮಕ್ಕಳು ವಿವಿದೆಡೆ ಚೆಸ್ ತರಬೇತಿಯನ್ನು ಪಡೆಯುತ್ತಿರುವುದು ಗಮನಾರ್ಹ. ಶಾಲಾ ಹಳೆ ವಿದ್ಯಾರ್ಥಿಯಾಗಿರುವ ಶಾಬ್ದಿಕ್ ವರ್ಮನಿಂದಾಗಿ ಶಾಲೆಯಲ್ಲಿ ಚೆಸ್ ಪರಂಪರೆ ಪ್ರಾರಂಭವಾಯಿತು.
ಅದನ್ನು ಈಕೆ ಮುಂದುವರಿಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ. ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಯು ಸಿಂಗಾಪುರ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು ಎಂದ ನಾಯಕ್ ಈ ವರ್ಷ ಇರಾನಿಗೆ ತೆರಳಲು ಸಿದ್ದತೆ ನಡೆಸುತ್ತಿದ್ದಾಳೆ ಎಂದರು. ಗೋಷ್ಠಿಯಲ್ಲಿ ಈಶಾ ಶರ್ಮ, ಶಾಲಾ ದೈಹಿಕ ಶಿಕ್ಷಣ ನಿರ್ದೇಶಕ ಸಂತೋಷ್ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.