ಉಡುಪಿ : ಸಾರ್ವಜನಿಕ ಸೀತಾಕಲ್ಯಾಣ ವರ್ಧಂತೋತ್ಸವ ಚನ್ನಕೇಶವ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಯಿತು. ಯಕ್ಷಾಂತರಂಗ ಕೋಟ ಇದರ ಕಲಾವಿದರು “ಹರಿಣಾಭಿಸರಣ” ಎಂಬ ರಾಮಾಯಣದ ಕಥಾಭಾಗವನ್ನು ದೊಂದಿಯಬೆಳಕಿನಲ್ಲಿ ಪ್ರಸ್ತುತ ಪಡಿಸಿದರು.
ಇದೇ ವೇದಿಕೆಯಲ್ಲಿ “ಪ್ಲಾಸ್ಟಿಕ್ ಪರಿತ್ಯಾಗ ಪವಿತ್ರಯಾಗ” ಎಂಬ ಧ್ಯೇಯವಾಕ್ಯದೊಂದಿಗೆ ಗ್ರಾಮ ಕಲ್ಯಾಣ ಸಮಿತಿಯ ಉದ್ಘಾಟನೆ ಹಾಗೂ ಲಾಂಛನ ಅನಾವರಣ ನಡೆಯಿತು.
ಡಾ|| ಉಷಾ ಹೇಮಂತ ಅವರು ಲಾಂಛನ ಅನಾವರಣಗೊಳಿಸಿದರು.ಗೌರದಾಧ್ಯಕ್ಷ ಡಾ. ವಿದ್ವಾನ್ ವಿಜಯ ಮಂಜರ್ ರವರು ಗ್ರಾಮ ಕಲ್ಯಾಣ ಸಮಿತಿಯ ಧ್ಯೇಯವನ್ನು ವಿವರಿಸಿದರು. ಕಾರ್ಯಧ್ಯಕ್ಷ ಶ್ರೀ ರಿಶಿರಾಜ್,ಅಧ್ಯಕ್ಷ ಶ್ರೀಪ್ರತಾಪ ಶೆಟ್ಟಿ ಉಪಸ್ಥಿತರಿದ್ದರು, ಕಾರ್ಯದರ್ಶಿ ಶ್ರೀ ಅನಂತ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.