ಬೆಳ್ತಂಗಡಿ : ಮದ್ಯವರ್ಜನ ಶಿಬಿರಗಳಿಗೆ ವಿಶೇಷ ಬೇಡಿಕೆಯಿರುವುದರಿಂದ ತಿಂಗಳಿಗೆ 2 ರಂತೆ ಶಿಬಿರಗಳನ್ನು ಸಂಘಟಿಸಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ರಾಜ್ಯಕಾರ್ಯದರ್ಶಿ ವಿವೇಕ್ ವಿ.ಪಾಸ್ ತಿಳಿಸಿದರು.
ಅವರು 59ನೇ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ 910 ಮದ್ಯವರ್ಜನ ಶಿಬಿರಗಳನ್ನು ರಾಜ್ಯಾಧ್ಯಂತ ನಡೆಸಲಾಗಿದೆ. ಇದರ ಪರಿಣಾಮವಾಗಿ 60,191 ಜನ ಪಾನಮುಕ್ತರಾಗಿ ನೆಮ್ಮದಿಯಜೀವನವನ್ನು ನಡೆಸುತ್ತಿದ್ದಾರೆ. ಇವರ ಸಾಧನೆ ಮತ್ತು ಬೆಳವಣಿಗೆಯನ್ನು ಗಮನಿಸಿದ ಬಹಳಷ್ಟು ಜನರು ಕುಡಿತ ಬಿಟ್ಟು ಉತ್ತಮ ಜೀವನ ನಡೆಸಬೇಕೆನ್ನುವ ಅಪೇಕ್ಷೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ವಾಮಿ ಕೃಪಾ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ವಿಶೇಷ ಮದ್ಯವರ್ಜನ ಶಿಬಿರಗಳಿಗೆ ಆಗಮಿಸುತ್ತಿದ್ದಾರೆ. ಇದುವರೆಗೆ 58 ವಿಶೇಷ ಶಿಬಿರಗಳನ್ನು ನಡೆಸಲಾಗಿದ್ದು 2469 ಜನರು ಇದರ ಪ್ರಯೋಜನ ಪಡೆದಿರುತ್ತಾರೆ. ಈ ಶಿಬಿರದಲ್ಲಿ ಶಿಕ್ಷಕರು, ರಾಜಕೀಯ ಮುಖಂಡರು, ಸರಕಾರಿ ನೌಕರರು, ವೈಧ್ಯರು, ವಕೀಲರು, ಅಭಿಯಂತರರು, ಸ್ವ ಉದ್ಯೋಗಿಗಳು ಹೀಗೆ ವಿವಿಧ ಹುದ್ದೆಗಳುಳ್ಳ ಜನರು ರಾಜ್ಯಾಧ್ಯಂತ ಆಗಮಿಸುತ್ತಿದ್ದು, ಮುಂದಕ್ಕೆ ವಿಶೇಷ ಬೇಡಿಕೆಯಿರುವುದರಿಂದ ತಿಂಗಳಿಗೆ 2 ರಂತೆ ಶಿಬಿರಗಳನ್ನು ಸಂಘಟಿಸಲಾಗುವುದು ಎಂದರು.
ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲ್ಯಾನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕುಡಿತ ಬಿಡುವುದೇ ರಾಷ್ಟ್ರ ಸೇವೆಯ ಪ್ರತೀಕವಾಗಿದೆ. ದೇಶದ ಪ್ರಗತಿಗೆ ವೈಯುಕ್ತಿಕವಾಗಿ ಕೊಡುವ ಕಾಣಿಕೆಯಾಗಿದೆ ಎಂದು ಶಿಬಿರಾರ್ಥಿಗಳನ್ನು ಪ್ರಶಂಶಿಸಿದರು.ಈ ಶಿಬಿರದಲ್ಲಿ 62 ಮಂದಿ ಹೆಸರನ್ನು ನೊಂದಾಯಿಸಿರುತ್ತಾರೆ. ವೈದ್ಯಾಧಿಕಾರಿಗಳಾಗಿ ಡಾ|ಪ್ರಭಾಶ್ಕುಮಾರ್, ಡಾ|ಮೋಹನ್ದಾಸ್ಗೌಡ, ಮನೋರೋಗ ತಜ್ಞರಾದ ಡಾ|ಶ್ರೀನಿವಾಸ್ ಭಟ್, ಸಲಹೆಗಾರರಾದಸುಮನಾ ಪಿಂಟೋ, ಶಿಬಿರಾಧಿಕಾರಿಗಳಾಗಿ ಮನೋಹರ್ಟಿ.ಎಸ್., ದೇವಿಪ್ರಸಾದ್ ಸುವರ್ಣ, ಆರೋಗ್ಯ ಸಹಾಯಕಿಯಾಗಿಚಿತ್ರಾ, ಶ್ರೀಮತಿ ನೇತ್ರಾವತಿ ಸಹಕರಿಸಲಿದ್ದಾರೆ.
ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕಶಿಬಿರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲಿದ್ದಾರೆ. 8 ದಿನಗಳ ವರೆಗೆ ನಡೆಯುವ ಈ ಶಿಬಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|ಡಿ.ವೀರೇಂದ್ರ ಹೆಗ್ಗಡೆಯವರು, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|ಎಲ್.ಎಚ್.ಮಂಜುನಾಥ್, ಜನಜಾಗೃತಿ ರಾಜ್ಯಾಧ್ಯಕ್ಷರಾದ ಸತೀಶ್ ಹೊನ್ನವಳ್ಳಿ ಆಗಮಿಸಿ ಮಾಹಿತಿ ನೀಡಲಿದ್ದಾರೆ. ಮುಂದಿನ ಶಿಬಿರ ಫೆಬ್ರವರಿ 01 ರಂದು ನಡೆಯಲಿದೆ. ಆಸಕ್ತರು ನೊಂದಾವಣೆಗಾಗಿ ಜನಜಾಗೃತಿ ವೇದಿಕೆಯ 08256-232133 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.