ಅಮೃತಸರ: ಪಂಜಾಬ್ನ ಲೂಧಿಯಾನಾದ ಆರ್ಎಸ್ಎಸ್ ಶಾಖೆ (ಸಭೆ) ಮೈದಾನದಲ್ಲಿ ಗುಂಡಿನ ದಾಳಿ ನಡೆದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಶಾಖೆ ಆರಂಭಕ್ಕೂ ಮುನ್ನ ಮಂಕಿಕ್ಯಾಪ್ ಧರಿಸಿದ್ದ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಮೋಟಾರ್ ಬೈಕ್ನಲ್ಲಿ ಆಗಮಿಸಿ ಮೈದಾನದತ್ತ ೨ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ.
ಸ್ವಯಂಸೇವಕರು ಮೈದಾನಕ್ಕೆ ಇನ್ನಷ್ಟೇ ಆಗಮಿಸಬೇಕಿದ್ದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಪೊಲೀಸರು ದಾಳಿ ನಡೆಸಿದವರ ಪತ್ತೆ ಕಾರ್ಯ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ 1991ರಲ್ಲಿ ಇಲ್ಲಿನ ದೇರ್ಸಿ ಮೈದಾನದಲ್ಲಿ ಆರೆಸ್ಎಸ್ ಶಾಖೆ ನಡೆಯುತ್ತಿದ್ದ ಸಂದರ್ಭ ಉಗ್ರರು ದಾಳಿ ನಡೆಸಿದ್ದು, 15 ಮಂದಿ ಗಾಯಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.