ರಾಯ್ಪುರ: ನಕ್ಸಲರೊಂದಿಗಿನ ಗುದ್ದಾಟವನ್ನು ಅಂತ್ಯಗೊಳಿಸಲು ಛತ್ತೀಸ್ಗಢ ಪೊಲೀಸರು ಹರ ಸಾಹಸವನ್ನು ಪಡುತ್ತಿದ್ದಾರೆ. ಆದರೆ ಈ ಬಾರಿ ಪಿಸ್ತೂಲ್, ಗನ್ಗಳ ಮೂಲಕವಲ್ಲ, ಪ್ರೀತಿಯ ಮೂಲಕ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನಪಡುತ್ತಿದ್ದಾರೆ.
ಕಳೆದ ತಿಂಗಳು ಪೊಲೀಸರಿಗೆ ಶರಣಾಗಿದ್ದ ನಕ್ಸಲ್ ಪ್ರೇಮಿಗಳಾದ ಪೊದಿಯಾಮಿ ಲಕ್ಷ್ಮಣ್ ಮತ್ತು ಮರ್ಕಮ್ ಅವರಿಗೆ ಶನಿವಾರ ಜಗ್ದಲ್ಪುರದಲ್ಲಿ ಪೊಲೀಸರೇ ತಾವೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಈ ವೇಳೆ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.
ಮರ್ಕಮ್ಳ ಮದುವೆಯ ಸಂಪೂರ್ಣ ಖರ್ಚನ್ನು ’ಸಮಾಜಿಕ ಏಕ್ತ ಮಂಚ್’ ಎಂಬ ಎನ್ಜಿವೋ ನೋಡಿಕೊಂಡರೇ, ಲಕ್ಷಣ್ ಜವಾಬ್ದಾರಿಯನ್ನು ಪೊಲೀಸರು ಹೊತ್ತುಕೊಂಡಿದ್ದರು.
ಇವರಿಗೆ ಮದುವೆಯನ್ನಷ್ಟೇ ಮಾಡಿಲ್ಲ, ಬದಲಾಗಿ ಮದುವೆ ಗಿಫ್ಟ್ ಆಗಿ ಉದ್ಯೋಗವನ್ನು ನೀಡಲಾಗಿದೆ. ಇಬ್ಬರನ್ನೂ ಕಾನ್ಸ್ಸ್ಟೇಬಲ್ಗಳಾಗಿ ನೇಮಿಸಲಾಗಿದೆ. ಶರಣಾಗತರಾದ ನಕ್ಸಲರಿಗೆ ಸರ್ಕಾರಿ ಉದ್ಯೋಗವನ್ನು ನೀಡುವ ಯೋಜನೆ ಸರ್ಕಾರದ್ದಾಗಿದೆ.
ನಕ್ಸಲ್ಗಳಾಗಿದ್ದ ವೇಳೆಯಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಉತ್ತಮ ಜೀವನ ನಡೆಸುವ ಉದ್ದೇಶದಿಂದ ಇವರು ನಕ್ಸಲ್ ಚಟುವಟಿಕೆ ತೊರೆದು ಪೊಲೀಸರಿಗೆ ಶರಣಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.