ಶ್ರೀನಗರ: ಗೃಹ ಸಚಿವಾಲಯದ ‘ವತನ್ ಕೋ ಜಾನೋ’ ಯೋಜನೆಯ ಅನ್ವಯ ದೆಹಲಿಗೆ ಭೇಟಿ ಕೊಟ್ಟ ಜಮ್ಮು ಕಾಶ್ಮೀರದ 240 ವಿದ್ಯಾರ್ಥಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂವಾದ ನಡೆಸಿದರು.
15-24 ವಯಸ್ಸಿನವರೆಗಿನ ಯುವಕ-ಯುವತಿಯರು ಇದರಲ್ಲಿ ಭಾಗವಹಿಸಿದ್ದು, ಈ ಯೋಜನೆಯನ್ನು ಕೇಂದ್ರ ರಾಜ್ಯದ ಸಹಕಾರದೊಂದಿಗೆ ನಡೆಸುತ್ತದೆ.
ಪ್ರಧಾನಿಯ ಅಧಿಕೃತ ನಿವಾಸ 7 ಆರ್ಸಿಆರ್ನ ಪಂಚವಟಿ ಪ್ರಾಂಗಣದಲ್ಲಿ ಈ ಯುವ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸಿದರು. ಭಾರತ, ಜಮ್ಮು ಕಾಶ್ಮೀರದ ಅಭಿವೃದ್ಧಿಯ ಬಗ್ಗೆ ತನಗಿರುವ ದೃಷ್ಟಿಕೋನವನ್ನು ಹಂಚಿಕೊಂಡರು. ಪ್ರಶ್ನೆಗಳನ್ನು ಕೇಳಿದರು, ಯುವ ವಿದ್ಯಾರ್ಥಿಗಳಿಂದ ಉತ್ಸಾಹದ ಉತ್ತರವನ್ನೂ ಪಡೆದರು.
ಜಮ್ಮು ಕಾಶ್ಮೀರದ ಪ್ರವಾಸೋದ್ಯಮ ಆ ರಾಜ್ಯವನ್ನು ಸಮೃದ್ಧಗೊಳಿಸಲಿದೆ ಎಂದು ಅಭಿಪ್ರಾಯಪಟ್ಟ ಮೋದಿ, ಉತ್ತಮ ಆರೋಗ್ಯ ಮತ್ತು ಡಿಜಿಟಲ್ ಸಂಪರ್ಕ ಒದಗಿಸಲು ಸರ್ಕಾರ ಶ್ರಮಿಸುತ್ತಿದೆ ಎಂದರು.
ಪಂಚವಟಿಯಲ್ಲಿ ಮೋದಿಯೊಂದಿಗೆ ಯುವ ವಿದ್ಯಾರ್ಥಿಗಳು ಚಹಾ-ತಿಂಡಿಯನ್ನು ಸ್ವೀಕರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.