ರಾಂಚಿ: ಭಾರತದಲ್ಲಿ ಅಸಹಿಷ್ಣುತೆ ವಿಚಾರವಾಗಿ ಚರ್ಚೆಗಳು ನಡೆಯುತ್ತಿರುವಾಗಲೇ ಹಿಂದೂ ಹಬ್ಬವಾದ ಮಕರ ಸಂಕ್ರಾಂತಿ ಪ್ರಯುಕ್ತ ಓರ್ವ ಮುಸ್ಲಿಂ ಗಾಳಿಪಟ ತಯಾರಕ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿರುವ 10,000 ಗಾಳಿಪಟಗಳನ್ನು ತಯಾರಿಸಿದ್ದಾರೆ. ಇದು ದೇಶದಲ್ಲಿ ಯಾವುದೇ ಅಸಹಿಷ್ಣುತೆ ಇಲ್ಲ ಎನ್ನುವ ಭಾವ ಮೂಡಿಸಿದೆ.
ರಾಂಚಿಯ ಗಾಳಿಪಟ ತಯಾರಕ 55 ವರ್ಷದ ತಾಲಿಬ್ ಕಳೆದ ನಾಲ್ಕು ದಶಕಗಳಿಂದ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಗಾಳಿಪಟಗಳನ್ನು ತಯಾರಿಸುತ್ತಿದ್ದಾರೆ. ತನ್ನ ಸಹವರ್ತಿಗಳೊಂದಿಗೆ ರಾಂಚಿಯ ಅಲ್ಪಸಂಖ್ಯಾತ ಪ್ರಾಬಲ್ಯವಿರುವ ಕಾರ್ಬಲ್ಲಾ ಪ್ರದೇಶದ ತನ್ನ ಹಳೆಯ ಹುಲ್ಲು ಹಾಸಿದ ಅಂಗಡಿಯಲ್ಲಿ ಗಾಳಿಪಟ ತಯಾರಿಸುವಲ್ಲಿ ಬ್ಯುಸಿಯಾಗಿದ್ದಾರೆ.
ದ್ವೇಷ ಹರಡಿಸುವ ಜನರು ತಮ್ಮದೇ ಆದ ಅಜೆಂಡಾ ಹೊಂದಿದ್ದಾರೆ. ಒಳ್ಳೆಯದನ್ನು ಮತ್ತು ಕೆಟ್ಟದನ್ನು ಅರ್ಥೈಸಿ ಅದನ್ನು ಬೇರ್ಪಡಿಸುವುದು ನಮ್ಮ ಜವಾಬ್ದಾರಿ ಎಂದು ತಾಲಿಬ್ ಹೇಳಿದ್ದಾರೆ.
ಅಸಹಿಷ್ಣುತೆ ಹೆಸರಲ್ಲಿ ಇತ್ತೀಚೆಗೆ ನಟರು, ನಿರ್ಮಾಪಕರು, ಕಲಾವಿದರು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದು, ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಧರ್ಮಾಂಧತೆ ಮೂಡಿಸಿದೆ.
ನಾನು ಇಲ್ಲಿ ಯಾವುದೇ ರೀತಿಯ ದ್ವೇಷವನ್ನು ಎದುರಿಸಿಲ್ಲ. ನನ್ನ ಹಿಂದೂ ಹಾಗೂ ಕ್ರ್ರಿಶ್ಚಿಯನ್ ಸಹೋದರರಿಂದ ಪ್ರೀತಿಯನ್ನೇ ಗಳಿಸಿದ್ದೇನೆ ಎಂದು ತಾಲಿಬ್ ಹೇಳಿದ್ದಾರೆ.
ತಲಿಬ್ ತಯಾರಿಸಿದ ಗಾಳಿಪಟಗಳನ್ನು ಇಲ್ಲಿಯ ಅರಗೋರಾ ಮೈದಾನದಲ್ಲಿ ನಡೆಯಲಿರುವ ’ನಮೋ ಪತಂಗ್ ಉತ್ಸವ್’ (ಗಾಳಿಪಟ ಉತ್ಸವ)ದ ಸಂದರ್ಭ ಹಾರಿಸಲಾಗುತ್ತದೆ. ಭಾರತೀಯ ಜನತಾ ಪಕ್ಷದ ಸದಸ್ಯರು, ಮೋದಿ ಅಭಿಮಾನಿಗಳ ಒಂದು ಗುಂಪು ಈ ಹಬ್ಬವನ್ನು ಆಯೋಜಿದೆ.
ಕೋಮು ದ್ವೇಷ ಹರಡಿಸುವ ಕೋಮುವಾದಿಗಳನ್ನು ಸಮಾಜ ಬಾಂಧವರು ಏಕತೆಯಿಂದ ಎದುರಿಸಬೇಕು ಎಂದು ತಾಲಿಬ್ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.