
ಟೆಹ್ರಾನ್: ಇರಾನ್ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಗಂಭೀರ ದೈಹಿಕ ನ್ಯೂನ್ಯತೆಗೆ ಒಳಗಾಗಿದ್ದು, ಪವಿತ್ರ ನಗರವಾದ ಕೋಮ್ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
56 ವರ್ಷದ ಧರ್ಮಗುರು ಮೊಜ್ತಬಾ ಖಮೇನಿ ಪ್ರಜ್ಞಾಹೀನರಾಗಿದ್ದು, ಗಂಭೀರ ವೈದ್ಯಕೀಯ ಸ್ಥಿತಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದಿ ಟೈಮ್ಸ್ ವರದಿ ಮಾಡಿದೆ.
ಇರಾನ್ನ ಸರ್ವೋಚ್ಚ ನಾಯಕ ಇರುವ ಸ್ಥಳ ಬಹಿರಂಗಗೊಳ್ಳುತ್ತಿರುವುದು ಇದೇ ಮೊದಲು. ಕೇಂದ್ರ ನಗರವಾದ ಕೋಮ್ ಟೆಹ್ರಾನ್ನಿಂದ ದಕ್ಷಿಣಕ್ಕೆ 87 ಮೈಲುಗಳು (ಸುಮಾರು 140 ಕಿಲೋಮೀಟರ್) ದೂರದಲ್ಲಿದೆ. ಶಿಯಾ ಇಸ್ಲಾಂನಲ್ಲಿ ಈ ನಗರವನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಇಸ್ಲಾಮಿಕ್ ಗಣರಾಜ್ಯದ ಧಾರ್ಮಿಕ ರಾಜಧಾನಿಯೂ ಇದಾಗಿದೆ.
“ಮೊಜ್ತಬಾ ಖಮೇನಿ ಅವರಿಗೆ ಕೋಮ್ನಲ್ಲಿ ತೀವ್ರ ಸ್ಥಿತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಅವರಿಗೆ ಆಡಳಿತದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ” ಎಂದು ಗಲ್ಫ್ ಮಿತ್ರರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲಾದ ಅಮೇರಿಕನ್ ಮತ್ತು ಇಸ್ರೇಲಿ ಗುಪ್ತಚರವನ್ನು ಆಧರಿಸಿದ ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


