ಔರಂಗಬಾದ್: ಅಜಂತಾ-ಎಲ್ಲೋರ ಗುಹೆಗಳಿಗೆ ಪ್ರಸಿದ್ಧಿಯನ್ನು ಹೊಂದಿರುವ ಔರಂಗಬಾದ್ನಲ್ಲಿ ಬಡವರಿಗಾಗಿ ರೋಟಿ ಬ್ಯಾಂಕ್ನ್ನು ಸ್ಥಾಪಿಸಲಾಗಿದೆ. ಜನರು ರೋಟಿಗಳನ್ನು ತಂದು ಇಲ್ಲಿ ಡಿಪಾಸಿಟ್ ಮಾಡಬಹುದು, ನಿರುದ್ಯೋಗಿಗಳು, ಬಡ ಬಗ್ಗರು, ವೃದ್ಧರು ಬಂದು ರೊಟ್ಟಿಗಳನ್ನು ಇಲ್ಲಿ ಡ್ರಾ ಮಾಡಿಕೊಳ್ಳಬಹುದು.
ಈ ರೋಟಿ ಬ್ಯಾಂಕ್ ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ಆರಂಭಿಸಲಾಗಿದೆ, ಎರಡನೇಯದಾಗಿ ಉತ್ತರಪ್ರದೇಶದ ಬುಂದೇಲ್ಕಾಂಡ್ನಲ್ಲೂ ಇದು ಆರಂಭವಾಗಿದೆ, ಯೂಸುಫ್ ಮುಖಾತಿ ಎಂಬುವವರು ಇದನ್ನು ಆರಂಭಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಇದು ಕಾರ್ಯನಿರ್ವಹಿಸುತ್ತಿದೆ ಒಪ್ಪೊತ್ತಿನ ಊಟಕ್ಕೆ ಪರದಾಡುವವರು ಇದರ ಸಹಾಯವನ್ನು ಪಡೆದುಕೊಳ್ಳುತ್ತಿದ್ದಾರೆ.
ಆಹಾರ ದಾನ ಮಾಡಲು ಮನಸ್ಸಿದ್ದವರು ಫಾರ್ಮ್ ಭರ್ತಿ ಮಾಡಿ ರೋಟಿ ಬ್ಯಾಂಕ್ನ ಸದಸ್ಯರಾಗುತ್ತಾರೆ, ಬಳಿಕ ತಾವು ತಯಾರು ಮಾಡಿದ ಅನ್ನ, ಸಾಂಬಾರು, ತಿಂಡಿ, ತಿನಿಸುಗಳನ್ನು ತಂದು ಇಲ್ಲಿ ನೀಡುತ್ತಾರೆ. ಫ್ರೆಶ್ ಫುಡ್ನ್ನೇ ನೀಡುವಂತೆ ವಿನಂತಿಸಲಾಗಿದೆ. ಬೆಳಿಗ್ಗೆ 11 ರಿಂದ ರಾತ್ರಿ 11ರವರೆಗೆ ಇದು ತೆರೆದಿರುತ್ತದೆ.
ಬಡವರು ತಮಗೆ ಬೇಕಾದ ಸಂದರ್ಭದಲ್ಲಿ ಬಂದು ಇಲ್ಲಿಂದ ತಿಂಡಿ ತೆಗೆದುಕೊಂಡು ಹೋಗುತ್ತಾರೆ. ಪ್ರಸ್ತುತ ಇದರಲ್ಲಿ 250 ಸದಸ್ಯರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.