ಮಂಗಳೂರು : ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಏಕಾಗ್ರತೆ, ಕಠಿಣ ಪರಿಶ್ರಮದಿಂದ ಜ್ಞಾನಾರ್ಜನೆ ಮಾಡವ ಮೂಲಕ ತಮ್ಮ ಗುರಿಯನ್ನು ತಲುಪುವ ಪ್ರಯತ್ನದಲ್ಲಿ ಸಫಲತೆಯನ್ನು ಕಾಣಬೇಕು ಎಂದು ಮಂಗಳೂರು ಹಾಂಗ್ಯೋ ಐಸ್ಕ್ರೀಮ್ನ ನಿರ್ದೇಶಕರಾದ ಶ್ರೀ ಪ್ರದೀಪ್ ಜಿ. ಪೈ ಅವರು ಹೇಳಿದರು. ಅವರು ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಕ್ರೀಡಾಸ್ಪೂರ್ತಿ ನೀಡುವ ಮೂಲಕ ಆರೋಗ್ಯವಂತ ವಿದ್ಯಾರ್ಥಿಗಳು ಮಾತ್ರ ಉತ್ಕೃಷ್ಟಮಟ್ಟದ ಅಂಕವನ್ನುಪಡೆದು ಸಾಧನೆ ಮಾಡಲು ಸಾಧ್ಯ ಈ ನಿಟ್ಟಿನಲ್ಲಿ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ತನ್ನನ್ನು ತೊಡಗಿಸಿಕೊಂಡಿದೆ. ಕ್ರೀಡೆಯಲ್ಲಿ ಇಚ್ಚಾಶಕ್ತಿಯ ಜತೆಯಲ್ಲಿ ಪ್ರಯತ್ನಶೀಲ ಮನೋಭಾವ ಕೂಡ ಮುಖ್ಯ. ಆಗ ತನ್ನ ಗುರಿಯನ್ನು ಮುಟ್ಟಬಹುದು ನಮ್ಮ ಬದುಕಿನ ಪ್ರತಿಹಂತದಲ್ಲೂ ಕೂಡ ಶಿಸ್ತು ಮತ್ತು ಪರಿಶ್ರಮ ಮುಖ್ಯ. ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು ಅಲ್ಲಿ ನಮ್ಮ ಸಮರ್ಪಣಭಾವ, ಶ್ರದ್ಧೆ, ಆತ್ಮವಿಶ್ವಾಸ, ಶಿಸ್ತು ಮುಖ್ಯ. ಆಗ ಯಶಸ್ಸನ್ನು ಕಾಣಲು ಸಾಧ್ಯ ಎಂದು ಹೇಳಿದರು.
ನಾವು ಯಾವ ನೆಲೆಯಲ್ಲಿ ಮಾರ್ಗದರ್ಶನಕ್ಕೆ ಒಳಪಡುತ್ತೇವೋ ಹಾಗೇ ಸಾಧನೆಯನ್ನು ಮಾಡುತ್ತೇವೆ. ಈ ನಿಟ್ಟಿನಲ್ಲಿ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ಕೊಡುತ್ತಿರುವುದು ಹೆಗ್ಗಳಿಕೆಯ ವಿಚಾರ. ಯುವ ಸಮುದಾಯದ ಪ್ರತಿನಿಧಿಗಳಾದ ವಿದ್ಯಾರ್ಥಿಗಳು ಅನ್ಯ ವಿಷಯಗಳ ಕಡೆ ಗಮನ ಹರಿಸದೇ, ಶಕ್ತಿಮೀರಿ ತಮ್ಮ ಪ್ರತಿಭೆಯನ್ನು ಒಳ್ಳೆಯ ಮಾರ್ಗದಲ್ಲಿ ಉಪಯೋಗಿಸಿದರೆ ಆಗ ತಮಗೆ ಯಶಸ್ಸು ಸಿಗುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಪ್ರೊ. ನರೇಂದ್ರ ಎಲ್.ನಾಯಕ್ ಅವರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್, ಶೈಕ್ಷಣಿಕ ಸಲಹೆಗಾರ ಮತ್ತು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರದೀಪ್ ಕುಮಾರ್, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಕರುಣಾಕರ ಬಳ್ಕೂರು, ಕ್ರೀಡಾ ಸಂಯೋಜಕ, ಹಿಂದಿ ವಿಭಾಗದ ಉಪನ್ಯಾಸಕ ಶ್ರೀ ಪ್ರಮೋದ್ ಕಿಣಿ ಉಪಸ್ಥಿತರಿದ್ದರು. ಇಂಗ್ಲೀಷ್ ವಿಭಾಗ ಉಪನ್ಯಾಸಕಿ ಝೀಟಾ ಡಿ’ಸೋಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಮಾರೋಪ : ಸಾಧನೆಯ ಪಥದಲ್ಲಿ ಯಶಸ್ಸನ್ನು ಗಳಿಸುವಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಕ್ರೀಯಾಶೀಲರಾಗಿರಬೇಕು ಎಂದು ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರಿಚರ್ಡ್ ಗೊನ್ಸಾಲ್ವೇಸ್ ಅವರು ಹೇಳಿದರು.ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ ಬಹಳ ಮುಖ್ಯ. ಅಭಿನವ ಬಿಂದ್ರ ಒಂದು ಚಿನ್ನದ ಪದಕವನ್ನು, ಮೈಕಲ್ ಫೆಲ್ಪ್ಸ್ ಒಲಿಂಪಿಕ್ ಕ್ರೀಡೆಯಲ್ಲಿ 21 ಚಿನ್ನದ ಪದಕಗಳನ್ನು ಪಡೆದುಕೊಂಡರು.
ಇದು ಅವರ ಸ್ಪರ್ಧಾತ್ಮಕ ಮನೋಭಾವವೇ ಕಾರಣ. ಮನಸ್ಸು ಸ್ಥಿರವಾಗಿರ ಬೇಕಾದರೆ, ದೇಹ ಆರೋಗ್ಯವಂತವಾಗಿರಬೇಕು ಅದಕ್ಕೆ ಕ್ರೀಡೆ ಸ್ಪೂರ್ತಿದಾಯಕ. ಆ ಮೂಲಕ ಶೈಕ್ಷಣಿಕವಾಗಿ ಯಶಸ್ಸನ್ನು ಗಳಿಸಲು ಸಾಧ್ಯವೆಂದು ಹೇಳಿದರು. ಕ್ರೀಡೆಯಲ್ಲಿರುವ ತಂಡದ ಪ್ರಯತ್ನದಿಂದ ಗುರಿಯನ್ನು ಮುಟ್ಟುತ್ತೇವೆ ಹಾಗೇ ನಮ್ಮ ಜೀವನದಲ್ಲೂ ಕೂಡ ನಿರಂತರವಾದ ಕಠಿಣ ಪರಿಶ್ರಮದಿಂದ ಸಾಧನೆಯ ಪಥವನ್ನು ಮುಟ್ಟಬೇಕು ಎಂದು ಹೇಳಿದರು.
ಹುಡುಗಿಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಶಿಫ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮನಸ್ವಿ, ಹುಡುಗರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಸುಮುಖ ಆಚಾರ್ ಮತ್ತು ಸಾಹಿಶ್ ಶಿರಾಲಿ ಪಡೆದರು. ಸಮಗ್ರ ಪ್ರಶಸ್ತಿಯನ್ನು ದ್ವಿತೀಯ ಪಿಯುಸಿ ಪ್ರಥಮ ವಿಭಾಗದ ವಿದ್ಯಾರ್ಥಿಗಳು ಪಡೆದುಕೊಂಡರು. ವಿಜೇತ ವಿದ್ಯಾರ್ಥಿಗಳಿಗೆ ಚಿನ್ನ, ಬೆಳ್ಳಿ, ಕಂಚು ಪದಕಗಳನ್ನು ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಪ್ರೊ. ನರೇಂದ್ರ ಎಲ್.ನಾಯಕ್ ಅವರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್, ಶೈಕ್ಷಣಿಕ ಸಲಹೆಗಾರ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ ಪ್ರದೀಪ್ ಕುಮಾರ್, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಕರುಣಾಕರ ಬಳ್ಕೂರು, ಕ್ರೀಡಾ ಸಂಯೋಜಕ ಹಿಂದಿ ವಿಭಾಗದ ಉಪನ್ಯಾಸಕ ಶ್ರೀ ಪ್ರಮೋದ್ ಕಿಣಿ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ವಿಭಾಗ ಉಪನ್ಯಾಸಕಿ ನೀಹಾ ಅಬ್ದುಲ್ ಶೇಖ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.