ದೇಶದಲ್ಲಿ ಅತಿ ಹೆಚ್ಚು ನಕ್ಸಲ್ ಉಪಟಳಕ್ಕೆ ಗುರಿಯಾಗುತ್ತಿರುವ ಪ್ರದೇಶ ಛತ್ತೀಸ್ಗಢದ ಬಸ್ತರ್ ಜಿಲ್ಲೆ. ಇಲ್ಲಿ ಒಂದು ಅಂಗಡಿಯನ್ನು ತೆರೆಯಲೂ ಜನ ಹಿಂದು ಮುಂದು ನೋಡುತ್ತಾರೆ. ಅಂತಹುದರಲ್ಲಿ 87 ವರ್ಷದ ಧರ್ಮಪಾಲ್ ಸೈನಿ ಎಂಬ ಸಮಾಜ ಸೇವಕ ಆಶ್ರಮವನ್ನು ನಡೆಸುತ್ತಿದ್ದಾರೆ.
ಇವರ ಆಶ್ರಮದಲ್ಲಿ ಹಿಂದುಳಿದ ಕುಟುಂಬಗಳ, ಬಡವರ ಒಟ್ಟು 350 ಹೆಣ್ಣು ಮಕ್ಕಳು ಆಶ್ರಯವನ್ನು ಪಡೆದುಕೊಂಡಿದ್ದಾರೆ. ಇವರಿಗೆ ಇಲ್ಲಿ ಕೇವಲ ಶಿಕ್ಷಣವನ್ನು ಮಾತ್ರ ನೀಡಲಾಗುತ್ತಿಲ್ಲ, ವಿವಿಧ ಕ್ರೀಡಾ ತರಬೇತಿಗಳನ್ನೂ ನೀಡಲಾಗುತ್ತದೆ.
ಸೈನಿಯವರ ಆಶ್ರಮದಲ್ಲಿ ಕ್ರೀಡಾ ತರಬೇತಿ ಪಡೆದ 150 ಮಕ್ಕಳು ಈಗಾಗಲೇ ದೇಶದಾದ್ಯಂತ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನೂ ಗೆದ್ದಿದ್ದಾರೆ.
‘ತಾವು’ ಎಂದೇ ಪ್ರಸಿದ್ಧಿ ಪಡೆದಿರುವ ಸೈನಿ ಅವರು ವಿನೋಭಾ ಬಾವೆ ಅವರ ಶಿಷ್ಯ. ‘ಅಗತ್ಯತೆಯಿರುವ ಪ್ರದೇಶಗಳಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತದೆ’ ಎಂಬ ತನ್ನ ಗುರುವಿನ ಸಲಹೆಯನ್ನು ಮನದಲ್ಲಿಟ್ಟುಕೊಂಡು ಬಂದ ಇವರು 1976ರಲ್ಲಿ ಬಸ್ತರ್ಗೆ ಬಂದಿಳಿದರು. ಆದರೆ ಅಲ್ಲಿನ ಸ್ಥಳೀಯ ಬುಡಕಟ್ಟು ಜನರ ವಿಶ್ವಾಸವನ್ನು ಗಳಿಸಲು ಅವರಿಗೆ ವರ್ಷಗಳೇ ಬೇಕಾಯಿತು. ಆಶ್ರಮ ಆರಂಭಿಸಿದ 5ನೇ ವರ್ಷದಲ್ಲಿ 40-40 ವಿದ್ಯಾರ್ಥಿನಿಯರು ಅಶ್ರಮದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರು.
ಅರಣ್ಯಾಧಿಕಾರಿಯೊಬ್ಬರು ಆಶ್ರಮದಲ್ಲಿ ಸ್ಪೋರ್ಟ್ಸ್ ಕೋಚಿಂಗ್ ನಡೆಸುವಂತೆ ನೀಡಿದ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡು ಅದರತ್ತ ಸೈನಿ ಕಾರ್ಯೋನ್ಮುಖರಾದರು. ಇವರ ಪ್ರಯತ್ನದ ಫಲವಾಗಿ 1982ರಲ್ಲಿ ಮಂಗಲ್ ಮೋಡೆ ಎಂಬ ಬಾಲಕಿ ಆಶ್ರಮಕ್ಕೆ ರಾಷ್ಟ್ರೀಯ ಮಟ್ಟದ ಪದಕ ದೊರೆಯುವಂತೆ ಮಾಡಿದಳು. ಅಂದಿನಿಂದ ಇಲ್ಲಿಯವರೆಗೆ ನೂರಾರು ಪದಕಗಳು ಈ ಆಶ್ರಮಕ್ಕೆ ದೊರೆತಿವೆ.
ಇಂದು ಇಲ್ಲಿ ಕರಾಟೆ, ಆರ್ಚರಿ, ಕಬಡ್ಡಿ, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, ಅಥ್ಲೆಟಿಕ್ಸ್, ಹ್ಯಾಂಡ್ಬಾಲ್, ವಾಲಿಬಾಲ್, ಫುಟ್ಬಾಲ್, ಥ್ರೋಬಾಲ್, ಸಾಫ್ಟ್ಬಾಲ್ ಕೋಚಿಂಗ್ಗಳನ್ನು ನೀಡಲಾಗುತ್ತಿದೆ.
ಅತೀ ಹಿಂದುಳಿದ ಮಕ್ಕಳಿಗೆ ಮಹತ್ವದ ಸಾಧನೆ ಮಾಡುವ ಅವಕಾಶವನ್ನು ಸೈನಿಯರ ಅಶ್ರಮ ಒದಗಿಸಿದೆ, ಈ ಮೂಲಕ ದೇಶದ ಭವಿಷ್ಯದ ಪ್ರಜೆಗಳ ಭವಿಷ್ಯವನ್ನು ಸುಭದ್ರಗೊಳಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.