ಇಸ್ಲಾಮಾಬಾದ್: 26/11 ಮುಂಬಯಿ ದಾಳಿಯ ಮಾಸ್ಟರ್ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿ ಕೊನೆಗೂ ರಾವಲ್ಪಿಂಡಿಯ ಅಡಿಯಾಲ ಜೈಲಿನಿಂದ ಹೊರಕ್ಕೆ ಬಂದೇ ಬಿಟ್ಟಿದ್ದಾನೆ. ಗುರುವಾರವಷ್ಟೇ ಆತನನ್ನು ಬಿಡುಗಡೆ ಮಾಡಬೇಕು ಎಂದು ಲಾಹೋರ್ ಹೈಕೋರ್ಟ್ ಪಾಕಿಸ್ಥಾನ ಸರ್ಕಾರಕ್ಕೆ ಆದೇಶ ನೀಡಿತ್ತು.
ಲಖ್ವಿ ವಿರುದ್ಧ ಪಾಕ್ ಸರ್ಕಾರ ಪ್ರಬಲ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ವಿಫಲವಾದ ಹಿನ್ನಲೆಯಲ್ಲಿ ನ್ಯಾಯಾಧೀಶ ಮೊಹಮ್ಮದ್ ಅನ್ವರುಲ್ ಹಕ್ ಆತನನ್ನು ಬಿಡುಗಡೆ ಮಾಡವಂತೆ ಆದೇಶಿಸಿದ್ದರು. ಅಲ್ಲದೇ ಲಖ್ವಿಗೆ ಒಂದು ಮಿಲಿಯನ್ ಮೌಲ್ಯದ ಎರಡು ಶೂರಿಟಿಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ಹಿನ್ನಲೆಯಲ್ಲಿ ಲಖ್ವಿಯನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಸದ್ಯ ಆತ ನಿಗೂಢ ಸ್ಥಳಕ್ಕೆ ತೆರಳಿದ್ದಾನೆ ಎನ್ನಲಾಗಿದೆ.
ಆತನ ಬಿಡುಗಡೆ 26/11 ಮುಂಬಯಿ ದಾಳಿಯ ಸಂತ್ರಸ್ಥರಿಗೆ ಮಾಡಿದ ಅವಮಾನ ಎಂದು ಭಾರತ ಹೇಳಿದೆ. ಇದರಿಂದ ತೀವ್ರ ಹಿನ್ನಡೆಯಾಗಿದೆ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.
ಉಗ್ರರ ವಿರುದ್ಧ ಪಾಕಿಸ್ಥಾನ ತೋರುತ್ತಿರುವ ಮೃದು ಧೋರಣೆಯ ಪರಿಣಾಮವಾಗಿಯೇ ಲಖ್ವಿ ಇಂದು ಜೈಲಿನಿಂದ ಹೊರಗೆ ಬರಲು ಸಾಧ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.