ಟೊರಾಂಟೊ: ಭಾರತೀಯ ಮೂಲದ ಕೆನಡಾ ಕುಸ್ತಿಪಟು ಅರ್ಜುನ್ ಗಿಲ್ ಕುಸ್ತಿ ತಂಡದ ಪ್ರಯೋಗ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆದಿದ್ದು, 2016ರ ರಿಯೊ ಒಲಿಂಪಿಕ್ಸ್ಗೆ ನೇಮಕಗೊಂಡಿದ್ದಾರೆ.
ಆಲ್ಬರ್ಟಾ ಪ್ರಾಂತ್ಯದ ಸ್ಟ್ರ್ಯಾಥ್ಕೋನಾ ಕೌಂಟಿಯಲ್ಲಿ 3 ದಿನಗಳ ಕಾಲ ನಡೆದ ನಡೆದ ಟಾಪ್ ಕ್ಯಾಲಿಬರ್ ಫ್ರೀಸ್ಟೈಲ್ ಹಾಗೂ ಗ್ರೀಕೊ ರೋಮನ್ ಸ್ಪರ್ಧೆಯ 97 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಅರ್ಹತೆ ಪಡೆದಿದ್ದು, ಕೆನಡಾವನ್ನು ಪ್ರತಿನಿಧಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಇನ್ನು 5 ಮಂದಿ ಅರ್ಹತೆ ಪಡೆದಿದ್ದಾರೆ.
2016ರ ಮಾರ್ಚ್ 4-6ರ ನಡುವೆ ಪಾನ್ ಅಮೇರಿಕನ್ ಒಲಿಂಪಿಕ್ ಕ್ವಾಲಿಫೈಯರ್ ನಡೆಯಲಿದ್ದು, ಆ.5 ರಿಂದ 21ರ ನಡುವೆ 2016 ಒಲಿಂಪಿಕ್ ಕ್ರೀಡೆಗಳು ಆರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.