ಮುಂಬಯಿ: ಐಪಿಎಲ್ಗೂ ವಿವಾದಕ್ಕೂ ಬೇರ್ಪಡಿಸಲಾಗದ ಸಂಬಂಧ ಬೆಳೆದುಬಿಟ್ಟಿದೆ. ಫಿಕ್ಸಿಂಗ್, ಬೆಟ್ಟಿಂಗ್ ಭೂತದಿಂದ ಐಪಿಎಲ್ನ್ನು ಹೊರಗಿಡುವುದು ಕಷ್ಟಕರವಾಗಿ ಪರಿಣಮಿಸಿದೆ. ಮೊನ್ನೆ ತಾನೇ ಆರಂಭವಾದ ಐಪಿಎಲ್ ಸೀಸನ್ 8ಕ್ಕೂ ಬುಕ್ಕಿಗಳ ಕಾಟ ಆರಂಭವಾಗಿದೆ.
ರಾಜಸ್ಥಾನ ರಾಯಲ್ಸ್ ತಂಡದ ಮುಂಬಯಿ ಮೂಲದ ಆಟಗಾರನೊಬ್ಬನನ್ನು ರಣಜಿ ಆಟಗಾರನೊಬ್ಬ ಸಂಪರ್ಕಿಸಿ ಮ್ಯಾಚ್ ಫಿಕ್ಸ್ ಮಾಡುವ ಆಫರ್ ನೀಡಿದ್ದಾನೆ ಎಂಬುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಇದು ಈಗಾಗಲೇ ಕೆಟ್ಟ ಕಾರಣಕ್ಕಾಗಿ ಸುದ್ದಿಯಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ಜರ್ಜರಿತಗೊಳಿಸಿದೆ.
ಆಟಗಾರ ಈ ವಿಷಯವನ್ನು ತನ್ನ ಫ್ರಾಂಚೈಸಿಯ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಅವರು ಇದನ್ನು ಬಿಸಿಸಿಐನ ಭ್ರಷ್ಟಾಚಾರ ತಡೆ ಮತ್ತು ಭದ್ರತಾ ಘಟಕಕ್ಕೆ ವಿವರಿಸಿದ್ದಾರೆ. ಹೀಗಾಗಿ ಆರ್ಆರ್ ತಂಡದ ಆಟಗಾರನನ್ನು ಬಿಸಿಸಿಐ ಘಟಕ ವಿಚಾರಣೆಗೊಳಪಡಿಸಿದೆ.
ಆಫರ್ ನೀಡಿದ ರಣಜಿ ಆಟಗಾರ ಈ ಬಾರಿಯ ಐಪಿಎಲ್ನಲ್ಲಿ ಆಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
ಸೀಸನ್ 6ರಲ್ಲಿ ಆರ್ಆರ್ ತಂಡದ ಎಸ್.ಶ್ರೀಶಾಂತ್, ಅಜಿತ್ ಚಂಡೀಲಾ, ಅಂಕಿತ್ ಚೌವಾಣ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿದ್ದರು. ಈ ಮೂವರು ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.