ಪುತ್ತೂರು: ಫಿಲೋಮಿನಾ ಕಾಲೇಜಿನ ಸುರಕ್ಷಾ ಗ್ರಾಹಕ ವೇದಿಕೆಯ ಸದಸ್ಯರು ಗ್ರಾಹಕ ಶಿಕ್ಷಣ ಸರ್ಟಿಫಿಕೇಟ್ ಕೋರ್ಸಿನ ಪ್ರಾಯೋಗಿಕ ಅಧ್ಯಯನದ ಅಂಗವಾಗಿ ಪುತ್ತೂರಿನ ಮಿನಿ ವಿಧಾನ ಸೌಧಕ್ಕೆ ಭೇಟಿ ನೀಡಿದರು. ಸಹಾಯಕ ಆಯುಕ್ತ ಸತೀಶ್ ಕುಮಾರ್ ಮತ್ತು ತಹಶೀಲ್ದಾರ್ ಸಣ್ಣರಂಗಯ್ಯ ಅವರ ನಿರ್ದೇಶನದಂತೆ ವಿದ್ಯಾರ್ಥಿಗಳು ಕಂದಾಯ ಇಲಾಖೆಯ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡರು.
ಭೂಮಿ ಶಾಖೆಗೆ ಭೇಟಿ ನೀಡಿದಾಗ ಉಪತಹಶೀಲ್ದಾರ್ ಗುಡ್ಡಪ್ಪ ಶೆಟ್ಟಿ , ಕರ್ನಾಟಕ ಭೂ ಸುಧಾರಣೆಯ ಕಾಯ್ದೆಯ ಸೆಕ್ಷನ್ 94ಸಿ ಪ್ರಕಾರ ಅಕ್ರಮವಾಗಿ ಮನೆ ನಿರ್ಮಿಸಿ ವಾಸಿಸುತ್ತಿರುವ ಜನರಿಗೆ ಸರಕಾರವು 9 ಸೆಂಟ್ಸು ವಿಸ್ತೀರ್ಣದ ಸ್ಥಳವನ್ನು ಸಕ್ರಮಗೊಳಿಸುವ ಯೋಜನೆಯ ಕುರಿತು ತಿಳಿಸಿದರು. ನಂತರ ಅವರು ಆಸ್ತಿ ಮಾರಾಟ ಅಥವಾ ಖರೀದಿ ಮಾಡಿದಾಗ ಆರ್ಟಿಸಿಯಲ್ಲಿ ಆಗುವ ಬದಲಾವಣೆಗಳ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು.
ಉಪತಹಶೀಲ್ದಾರ್ ಎನ್ ಶಶಿಕಲಾ ಸಾಮಾಜಿಕ ಭದ್ರತೆ ಶಾಖೆಯು ನಿರ್ವಹಿಸುವ ವೃದ್ಧಾಪ್ಯ ಯೋಜನೆ, ಅಂಗವಿಕಲ ಮಾಸಾಶನ ಯೋಜನೆ, ವಿಧವಾ ವೇತನ ಯೋಜನೆ, ಅಂತ್ಯ ಸಂಸ್ಕಾರ ಯೋಜನೆ, ವಿವಾಹ ವಿಚ್ಛೇದನ ಯೋಜನೆ ಇತ್ಯಾದಿಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಉಪತಹಶೀಲ್ದಾರ್ ಶ್ರೀದರ್ ಕಂದಾಯ ಇಲಾಖೆಯ ವತಿಯಿಂದ ಸ್ವಾಗತಿಸಿ, ಪೂರಕ ಮಾಹಿತಿಯೊಂದಿಗೆ ಸಹಕರಿಸಿದರು. ಸುರಕ್ಷಾ ಗ್ರಾಹಕ ವೇದಿಕೆಯ ನಿರ್ದೇಶಕರಾದ ಪ್ರೊ. ದಿನಕರ ರಾವ್ ಕಾರ್ಯಕ್ರಮವನ್ನು ಸಂಯೋಜಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.